ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ ನಲ್ಲಿ ಇಬ್ಬರು ಉಗ್ರರು ಹತ!

Pinterest LinkedIn Tumblr


ಶ್ರೀನಗರ: ಪಾಕ್​​ ಮೂಲದ ಇಬ್ಬರು ಉಗ್ರರನ್ನು ಭಾರತ ಸೇನೆ ಸೆದೆ ಬಡೆದಿದೆ. ಜಮ್ಮು-ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಇನ್ನು ಮೃತರನ್ನು ಅಲ್‌- ಬದರ್‌ ಉಗ್ರ ಸಂಘಟನೆ ಮುಖ್ಯಸ್ಥ ಜೀನತ್‌ ಉಲ್‌- ಇಸ್ಲಾಂ ಮತ್ತು ಶಾಕೀಲ್‌ ದಾರ್‌ ಎಂದು ಗುರುತಿಸಲಾಗಿದೆ. ದಕ್ಷಿಣ ಕಾಶ್ಮೀರದ ಕಟ್ಪೊರಾ ಪ್ರದೇಶದಲ್ಲಿ ಉಗ್ರರು ಇದ್ದಾರೆ ಎಂಬ ಮಾಹಿತಿ ಮೇರೆಗೆ ಭಾರತ ಸೇನೆ ದಾಳಿ ನಡೆಸಿದೆ. ಈ ವೇಳೆ ಶರಣಾಗುವ ಅವಕಾಶ ನೀಡಿದರು ದಾಳಿ ನಡೆಸಿದ ಉಗ್ರರ ಮೇಲೆ ಪ್ರತಿದಾಳಿ ನಡೆಸಿ ಎನ್​​ಕೌಟಂರ್​​ ಮಾಡಿದೆವು ಎಂದು ಭದ್ರತಾ ಪಡೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆಯೂ ಇಲ್ಲಿನ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿತ್ತು. ಭಾರತ ಸೇನಾ ಪಡೆ ದಾಳಿಯಲ್ಲಿ ಜೈಷ್‌-ಇ-ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಗೆ ಸೇರಿದ ನಾಲ್ವರು ಮೃತರಾಗಿದ್ದರು. ಹಂಜಾನ್ ಪ್ರದೇಶದಲ್ಲಿ ಉಗ್ರರು ಚಲವಲನ ನಿಗಾವಹಿಸಿದ್ದ ಸೇನೆ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯ ಆರಂಭಿಸಿತು. ಇದೇ ಸಂದರ್ಭದಲ್ಲಿ ಸೇನೆ ಮೇಲೆ ದಾಳಿ ಮಾಡಿದ ಭಯೋತ್ಪಾದಕರ ಮೇಲೆಯೇ ಪ್ರತಿದಾಳಿ ನಡೆಸಿ ಉಗ್ರರನ್ನು ಹೊಡೆದುರುಳಿಸಿದೆ.

ಗುಂಡಿನ ಚಕಮಕಿಯ ಸುದ್ದಿ ಹರಡುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಯುವಕರ ಗುಂಪು ಭದ್ರತಾ ಪಡೆ ಸಿಬ್ಬಂದಿಯತ್ತ ಕಲ್ಲು ತೂರಾಟ ನಡೆಸಿದೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಪೆಲೆಟ್‌ ಗುಂಡು ಹಾಗೂ ಅಶ್ರುವಾಯು ಪ್ರಯೋಗಿಸಿದರು ಎನ್ನಲಾಗಿದೆ. ಅಲ್ಲದೇ ಗಲಭೆಯಲ್ಲಿ ಹನ್ನೇರಡಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆಗಾಗಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯ್ತು ಎನ್ನುತ್ತಾರೆ ಕಾಶ್ಮೀರದ ಹಿರಿಯ ಪೊಲೀಸ್‌ ಮಹಾನಿರ್ದೇಶಕ ಎಸ್‌.ಪಿ. ಪಣಿ.

ಈ ವರ್ಷ ಭದ್ರತಾ ಪಡೆ 250 ಉಗ್ರರನ್ನು ಹತ್ಯೆ ಮಾಡಿದೆ ಎನ್ನಲಾಗಿದೆ. ಹಂಜಾನ್‌ನಲ್ಲಿ ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಇಲಾಖೆ ಖಚಿತವಾದ ಮಾಹಿತಿ ನೀಡಿತ್ತು. ಮೃತ ಉಗ್ರರು ಜೈಷೆ-ಇ-ಮೊಹಮದ್‌ (ಜೆಇಎಂ) ಉಗ್ರಗಾಮಿ ಸಂಘಟನೆಗೆ ಸೇರಿದ್ದಾರೆ. ಇವರಲ್ಲಿ ಒಬ್ಬ ವಿದೇಶಿ ಉಗ್ರನಾಗಿದ್ದು ಅವನು ಪಾಕಿಸ್ತಾನಕ್ಕೆ ಸೇರಿದನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Comments are closed.