ರಾಷ್ಟ್ರೀಯ

ಮಧ್ಯಪ್ರದೇಶ, ರಾಜಸ್ಥಾನದ ರಾಜ್ಯ ಸರಕಾರಗಳಿಗೆ ನೀಡಿರುವ ಬೆಂಬಲ ವಾಪಸ್​​: ಬಿಎಸ್​ಪಿ ಎಚ್ಚರಿಕೆ!

Pinterest LinkedIn Tumblr


ನವದೆಹಲಿ: ಎಸ್ಸಿ ಎಸ್ಟಿ ದೌರ್ಜನ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ್ದ ದಲಿತ ಹೋರಾಟಗಾರರ ವಿರುದ್ಧದ ಕೇಸುಗಳನ್ನು ಕೂಡಲೇ ವಾಪಸ್​​ ಪಡೆಯುವಂತೆ ಮಧ್ಯಪ್ರದೇಶ ಮತ್ತು ರಾಜಸ್ಥಾನದ ಕಾಂಗ್ರೆಸ್​ ಸರ್ಕಾರಕ್ಕೆ ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿಯವರು ಒತ್ತಾಯಿಸಿದ್ದಾರೆ. ಒಂದು ವೇಳೆ ದಲಿತ ಹೋರಾಟಗಾರರ ವಿರುದ್ಧದ ಪ್ರಕರಣಗಳನ್ನು ವಜಾಗೊಳಿಸದಿದ್ದರೇ, ತಮಗೆ ನೀಡಿರುವ ಬೆಂಬಲ ವಾಪಸ್​​ ಪಡೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಏಪ್ರಿಲ್​​ 2ರಂದು ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿ ದೇಶಾದ್ಯಂತ ದಲಿತ ಸಂಘಟನೆಗಳು ‘ಭಾರತ್ ಬಂದ್’ಗೆ ಕರ ನೀಡಿದ್ದವು. ಬಂದ್​​ ಆಚರಣೆ ವೇಳೆ ಅನೇಕ ಕಡೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಹಲವೆಡೆ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು 8 ಮಂದಿ ಬಲಿಯಾಗಿದ್ದರು. ಮಧ್ಯಪ್ರದೇಶ ರಾಜ್ಯವೊಂದರಲ್ಲೇ 6 ಮಂದಿ ಅಸುನೀಗಿದ್ದರು.

ಪಂಜಾಬ್, ಬಿಹಾರ್, ಒಡಿಶಾ ಮೊದಲಾದ ಕಡೆ ದಲಿತ ಸಂಘಟನೆಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಹಲವು ರಾಜ್ಯಗಳಲ್ಲಿ ರೈಲುಗಳ ಸಂಚಾರವನ್ನು ತಡೆಗಟ್ಟಲಾಗಿತ್ತು. ಆಲ್ವಾರ್​ನಲ್ಲಿ ಪ್ರತಿಭಟನಾಕಾರರು ಶತಾಬ್ದಿ ರೈಲನ್ನು ನಿಲ್ಲಿಸಿ ಅದರ ಕಿಟಕಿಗಳನ್ನು ಹಾನಿಗೊಳಿಸಿದ್ದರು. ಖೇರ್​ತಾಲ್​ನಲ್ಲಿ ಕಲ್ಲುತೂರಾಟವಾದ ವರದಿಯೂ ಬಂದಿತ್ತು. ಪಂಜಾಬ್​ನ ಪಾಟಿಯಾಲಾ, ರಾಜಸ್ಥಾನದ ಭರತ್​ಪುತರ್, ಜಾರ್ಖಂಡ್​ನ ರಾಂಚಿಯಲ್ಲಿ ದಲಿತರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು.

ಅನೇಕ ಕಡೆ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು. ಆಗ್ರಾದಿಂದ ದಿಲ್ಲಿಯವರೆಗೆ ನೂರಾರು ದಲಿತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಕಲ್ಲುತೂರಾಟ ನಡೆಸುತ್ತಿದ್ದ ಪ್ರತಿಭಟನಾಕಾರರತ್ತ ಪೊಲೀಸರು ಒಂದು ಸುತ್ತು ಗುಂಡಿನ ದಾಳಿ ನಡೆಸಿದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ ಎನ್ನಲಾಗಿದೆ. ಹೀಗಾಗಿ ಅಂದು ಭಾರತ್​​ ಬಂದ್​ ಆಚರಣೆಯಲ್ಲಿ ಭಾಗಿಯಾಗಿದ್ದ ದಲಿತ ಹೋರಾಟಗಾರರ ವಿರುದ್ಧ ಎಫ್​ಐಆರ್​​ ದಾಖಲಿಸಲಾಗಿತ್ತು. ಇದೀಗ ದಲಿತ ಹೋರಾಟಗಾರರ ಮೇಲೆ ದಾಖಲಾಗಿರುವ ಎಫ್​ಐಆರ್​​ ವಾಪಸ್​ ಪಡೆಯುವಂತೆ ಮಾಯಾವಾತಿ ಅವರು, ಕಾಂಗ್ರೆಸ್​ ಆಡಳಿತರೂಢ ಮಧ್ಯಪ್ರದೇಶ, ರಾಜಸ್ಥಾನ ಸರ್ಕಾರಗಳಿಗೆ ಆಗ್ರಹಿಸಿದ್ದಾರೆ.

ದಲಿತ ಹೋರಾಗಾರರ ವಿರುದ್ಧದ ಪ್ರಕರಣಗಳನ್ನು ವಾಪಾಸು ಪಡೆಯದಿದ್ದರೆ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮರುಪರಿಶೀಲನೆ ಮಾಡಬೇಕಾಗುತ್ತದೆ. ಉಭಯ ರಾಜ್ಯಗಳಲ್ಲಿ ಬಿಎಸ್ಪಿ, ಕಾಂಗ್ರೆಸ್ ಸರ್ಕಾರಗಳಿಗೆ ಬಾಹ್ಯ ಬೆಂಬಲ ನೀಡುತ್ತಿದೆ. ಹೊಸ ವರ್ಷದ ಸಂದರ್ಭದಲ್ಲಿ ಮತ್ತು ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ತನ್ನ ಭರವಸೆ ಈಡೇರಿಸುವಂತೆ ಎಚ್ಚರಿಸಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ವಿಧಾನಸಭಾ ಚುನಾವಣೆ ಸಂದರ್ಭ ನೀಡಿದ ತನ್ನ ಆಶ್ವಾಸನೆಯಿಂದ ಹಿಂದಕ್ಕೆ ಸರಿಯುವಂತಿಲ್ಲ ಎಂದು ಮಾಯಾವತಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

Comments are closed.