ರಾಷ್ಟ್ರೀಯ

ಗುಜರಾತ್​ ಶಾಲೆಗಳಲ್ಲಿ ‘ಎಸ್​ ಸರ್​​’ ಬದಲು ಇದನ್ನು ಹೇಳುವುದು ಕಡ್ಡಾಯ!

Pinterest LinkedIn Tumblr


ಅಹಮದಾಬಾದ್: ಶಾಲೆಗಳಲ್ಲಿ ಶಿಕ್ಷಕರು ಹಾಜರಾತಿ ಹಾಕಿದಾಗ ಮಕ್ಕಳು ‘ಎಸ್​ ಸರ್’​ ಎನ್ನುವುದು ರೂಢಿ. ದೇಶದೆಲ್ಲೆಡೆ ಇರುವ ಬಹುತೇಕ ಶಾಲೆಗಳಲ್ಲಿ ಇದೇ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ, ಗುಜರಾತ್​ನಲ್ಲಿ ಇನ್ನುಮುಂದೆ ಆ ರೀತಿ ಹೇಳುವಂತಿಲ್ಲ. ಯಾಕೆ ಅಂತೀರಾ? ಹೇಳ್ತೀವಿ ಓದಿ…

ಗುಜರಾತ್​ನ ಬಿಜೆಪಿ ಸರ್ಕಾರದ ದ್ವಿತೀಯ ದರ್ಜೆ ಮತ್ತು ಉನ್ನತ ಶಿಕ್ಷಣ ಮಂಡಳಿ ಹಾಗೂ ಕೇಂದ್ರದ ಪ್ರಾಥಮಿಕ ಶಿಕ್ಷಣ ಸಚಿವಾಲಯ ಹೊಸ ಆದೇಶವನ್ನು ಜಾರಿಗೊಳಿಸಿದ್ದು, ಅದರ ಅನ್ವಯ 1ರಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳು ಇನ್ನು ಮುಂದೆ ಹಾಜರಾತಿ ಹಾಕಿದಾಗ ಜೈ ಹಿಂದ್​ ಅಥವಾ ಜೈ ಭಾರತ್​ ಎಂದು ಹೇಳಬೇಕು.

ಸರ್ಕಾರಿ ಶಾಲಾ- ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ವ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯವಾಗಲಿದೆ. ಜನವರಿ 1ರಿಂದ ಅಂದರೆ ಇಂದಿನಿಂದಲೇ ಗುಜರಾತ್​ನಲ್ಲಿ ಈ ನಿಯಮ ಜಾರಿಯಾಗಲಿದೆ. ಶಾಲಾ ದಿನಗಳಿಂದಲೇ ಮಕ್ಕಳಿಗೆ ಸಂಸ್ಕಾರ ಮತ್ತು ಧರ್ಮದ ಜಾಗೃತಿ ಮೂಡಿಸಬೇಕು ಎಂಬ ಕಾರಣದಿಂದ ಈ ನಿಯಮ ಜಾರಿಗೆ ತರಲಾಗಿದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಗುಜರಾತ್ ಶಿಕ್ಷಣ ಇಲಾಖೆ ಸಚಿವ ಭೂಪೇಂದ್ರ ಸಿನ್ಹಾ ಚುಡಾಸಮ ತಿಳಿಸಿದ್ದಾರೆ.

Comments are closed.