ರಾಷ್ಟ್ರೀಯ

ಸಂಸತ್​ ಭವನದ ಬಳಿ ಸಂಸದರಲ್ಲದ ಡಿಕೆಶಿ ಪ್ರತಿಭಟನೆಗೆ ಆಕ್ರೋಶ

Pinterest LinkedIn Tumblr


ನವದೆಹಲಿ: ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ ತೆಗೆದಿರುವುದನ್ನು ವಿರೋಧಿಸಿ, ರಾಜ್ಯ ಸಂಸದರು ಇಂದು ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಈ ಪ್ರತಿಭಟನೆಯಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಭಾಗಿಯಾಗಿರುವುದಕ್ಕೆ ಸಂಸತ್​ ಭವನದ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ ಭವನದಲ್ಲಿ ಸಂಸದರ ಹೊರತು ಬೇರೆಯವರು ಪ್ರತಿಭಟಿಸುವಂತಿಲ್ಲ. ಸಂಸತ್ ಭವನದ ಆವರಣದೊಳಗೆ ಇತರರು ಮಾತನಾಡುವಂತಿಲ್ಲ. ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡುವಂತಿಲ್ಲ. ಮಾಜಿ ಸಂಸದರು ಕೂಡ ಹೇಳಿಕೆ ನೀಡುವಂತಿಲ್ಲ. ಆದರೆ ಡಿ.ಕೆ. ಶಿವಕುಮಾರ್ ನಿಯಮ ಮೀರಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಂಸತ್ ಭವನದ ಭದ್ರತ ಸಿಬ್ಬಂದಿ ಆರೋಪಿಸಿದ್ದಾರೆ.

ಮೇಕೆದಾಟು ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಅನುಮತಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು ಸರ್ಕಾರ ಈ ಯೋಜನೆಗೆ ತಡೆ ಕೋರುವಂತೆ ಪ್ರಧಾನಿಗೆ ಪತ್ರ ಬರೆದಿದ್ದರು . ಅಲ್ಲದೇ, ಚಳಿಗಾಲ ಅಧಿವೇಶನದ ವೇಳೆಯೂ ಪ್ರತಿಭಟನೆ ನಡೆಸಿದ್ದರು. ಈ ಹೋರಾಟಕ್ಕೆ ಪ್ರತಿಯಾಗಿ ಇಂದು ರಾಜ್ಯದ ಸಂಸದರು ಪಕ್ಷಬೇಧ ಮರೆತು ಸಂಸತ್​ ಎದುರು ಪ್ರತಿಭಟನೆ ನಡೆಸಿದ್ದಾರೆ.

Comments are closed.