ಕರ್ನಾಟಕ

ಅಪರೇಷನ್​ ಕಮಲಕ್ಕಾಗಿ ದೆಹಲಿಗೆ ಹೊರಟು ನಿಂತ ರಮೇಶ್​ ಜಾರಕಿಹೊಳಿ, ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​ ನಾಯಕರ ಜೊತೆ ಮಾತನಾಡಲು ಮುಂದಾಗದ ಶಾಸಕ ರಮೇಶ್​ ಜಾರಕಿಹೊಳಿ ನಡೆ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವುದರ ಜೊತೆಗೆ ಅವರು ಸದ್ದಿಲ್ಲದಂತೆ ಅಪರೇಷನ್​ ಕಮಲಕ್ಕೆ ಮುಂದಾಗುತ್ತಿದ್ದಾರೆ ಎಂಬ ಸುಳಿವು ನೀಡುತ್ತಿದೆ.

ಸಿದ್ದರಾಮಯ್ಯ ಮಾತುಕತೆಗೆ ಆಹ್ವಾನಿಸಿದ್ದರು. ಅದನ್ನು ಧಿಕ್ಕಾರಿಸಿ ಬೆಳಗಾವಿಗೆ ರಮೇಶ್​ ಜಾರಕಿಹೊಳಿ ಪ್ರಯಾಣಿಸಿದ್ದರು. ಇದರ ಬೆನ್ನಲ್ಲೇ ನಿನ್ನೆ ಯಡಿಯೂರಪ್ಪ ಕೂಡ ಬೆಳಗಾವಿಗೆ ತೆರಳಿದ್ದರು. ಆದರೆ, ನಾನು ಲೋಕಸಭಾ ಚುನಾವಣೆ ಚರ್ಚೆಗೆ ಬಂದಿದ್ದೇನೆ. ನಾನು ಸತ್ಯವಾಗಿ ರಮೇಶ್​ ಅವರನ್ನು ಭೇಟಿಯಾಗುವುದಿಲ್ಲ ಎಂದು ಮಾಧ್ಯಮಗಳ ಮುಂದೆ ತಿಳಿಸಿದ್ದರು. ಈ ನಡುವೆ ಇಂದು ರಮೇಶ್​ ಹಾಗೂ ಯಡಿಯೂರಪ್ಪ ನಡುವಳಿಕೆಗಳು ಅಪರೇಷನ್​ ಕಮಲ ನಡೆಸುವ ಎಲ್ಲಾ ಸಾಧ್ಯತೆಗಳು ಇವೆ ಎಂಬ ಸುಳಿವು ನೀಡುತ್ತಿದೆ.

ಗೋಕಾಕ್ ನಿಂದ ಮುಂಬೈಗೆ ತೆರಳಿರುವ ರಮೇಶ್ ಜಾರಕಿಹೊಳಿ ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಕೂಡ ನಾಳೆ ರಾಜ್ಯಲ್ಲಿ ನಡೆಯಲಿರುವ ಸರಣಿ ಸಭೆ ಬಿಟ್ಟು ದೆಹಲಿಗೆ ತೆರಳಲಿರುವುದು ಕುತೂಹಲ ಮೂಡಿಸಿದೆ.

ಮೈತ್ರಿ ಸರ್ಕಾರದ ಕಾರ್ಯ ಚಟುವಟಿಕೆ, ಭ್ರಷ್ಟಾಚಾರ, ರಾಜ್ಯದ ರೈತರ ಸಾಲ ಮನ್ನಾ ಘೋಷಣೆ, ಅನುಷ್ಟಾನಕ್ಕೆ ಬಾರದ ಯೋಜನೆ ಬಗ್ಗೆ ಹೈಕಮಾಂಡ್ ಗೆ ಮಾಹಿತಿಯನ್ನು ಪಡೆಯಲು ಯಡಿಯೂರಪ್ಪ ಅವರಿಗೆ ಹೈ ಕಮಾಂಡ್​ ಬುಲಾವ್​ ನೀಡಿದೆ ಎನ್ನಲಾಗಿದೆ. ಆದರೆ, ಇದರ ಹಿಂದಿನ ಅಸಲಿ ಕಾರಣ ರಮೇಶ್​ ಜಾರಕಿಹೊಳಿ ವಿಷಯ ಕೂಡ ಹೈಕಮಾಂಡ್​ ಜೊತೆ ಪ್ರಸ್ತಾಪಿಸುವುದಾಗಿದೆ.

ನಾಲ್ಕು ದಿನವರೆಗೂ ಕಾದು ನೋಡುತ್ತೇನೆ ಎಂದ ರಮೇಶ್​ ಗಡುವು ಕೂಡ ಮುಗಿಯುತ್ತ ಬಂದಿದೆ. ರಮೇಶ್​ ನಡುವಳಿಕೆಗಳನ್ನು ಗಮನಿಸಿದರೆ ಪಕ್ಷಕ್ಕೆ ಭಾರೀ ಶಾಕ್​ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ರಮೇಶ್​ ಭಾರೀ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂಬ ಅನುಮಾನ ಮೂಡಿಸಿದೆ.

Comments are closed.