ರಾಷ್ಟ್ರೀಯ

ಹನುಮಂತನ ಜಾತಿ ಬಗ್ಗೆ ಚರ್ಚೆ ಮಾಡಬೇಡಿ ಏಕೆಂದರೆ ಆತ ಓರ್ವ ಕ್ರೀಡಾಪಟು ಆಗಿದ್ದ : ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್

Pinterest LinkedIn Tumblr

ಅಮ್ರೋಹಾ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಭಗವಾನ್ ಹನುಮಂತನ ಜಾತಿ ಚರ್ಚೆಗೆ ಈಗ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಎಂಟ್ರಿ ನೀಡಿದ್ದು, ಹನುಮಂತನ ಜಾತಿ ಬಗ್ಗೆ ಚರ್ಚೆ ಮಾಡಬೇಡಿ ಏಕೆಂದರೆ ಆತ ಓರ್ವ ಕ್ರೀಡಾಪಟು ಆಗಿದ್ದ ಎಂದು ಹೇಳಿದ್ದಾರೆ.

ಹನುಮಂತನನ್ನು ಈಗಲೂ ಹಲವು ಕ್ರೀಡಾಪಟುಗಳು ಆರಾಧುಸುತ್ತಾರೆ, ಹನುಮಂತನ ಜಾತಿ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದು ಚೇತನ್ ಚೌಹಾಣ್ ಅಭಿಪ್ರಾಯಪಟ್ಟಿದ್ದಾರೆ. ಹನುಮಂತ ಓರ್ವ ಕ್ರೀಡಾಪಟು ಆಗಿದ್ದ, ಆತ ತನ್ನ ಶತ್ರುಗಳೊಂದಿಗೆ ಕುಸ್ತಿ ಮಾಡುತ್ತಿದ್ದ ಎಂದು ನಂಬಿದ್ದೇನೆ. ಶಕ್ತಿ ಹಾಗೂ ಸಾಮರ್ಥ್ಯಗಳಿಗಾಗಿ ಈಗಲೂ ಹಲವು ಕ್ರೀಡಾಪಟುಗಳು ಹನುಮಂತನನ್ನು ಆರಾಧಿಸುತ್ತಾರೆ ಎಂದು ಚೌಹಾಣ್ ಹೇಳಿದ್ದಾರೆ.

ಯಾವುದೇ ಕ್ರೀಡಾಪಟುವೂ ಹನುಮಂತನನ್ನು ಆತನ ಜಾತಿ ಯಾವುದು ಎಂದು ನೋಡಿ ಆರಾಧಿಸುವುದಿಲ್ಲ. ಸಂತ, ಅತೀಂದ್ರಿಯ ಶಕ್ತಿಗಳಿಗೆ ಜಾತಿ ಇರುವುದಿಲ್ಲ. ಹಾಗೆಯೇ ಹನುಮಂತನಿಗೂ ಸಹ. ನಾನು ಆತನನ್ನು ದೇವರೆಂದು ಪರಿಗಣಿಸುತ್ತೇನೆ ಎಂದು ಚೌಹಾಣ್ ಹೇಳಿದ್ದಾರೆ.

Comments are closed.