ರಾಷ್ಟ್ರೀಯ

ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್​​ ಜಯಭೇರಿ ಬಾರಿಸಿದ ಬಳಿಕ ಮತ್ತೊಂದು ಗೆಲುವು

Pinterest LinkedIn Tumblr


ನವದೆಹಲಿ: ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್​​ ಜಯಭೇರಿ ಬಾರಿಸಿದ ಬಳಿಕ ಮತ್ತೊಂದು ಗೆಲುವು ಸಿಕ್ಕಿದೆ. ಜಾರ್ಖಂಡ್​​ನ ಸಿಮ್ಡೇಗಾ ಜಿಲ್ಲೆಯ ಕೊಲೆಬಿರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದೆ. ಕಾಂಗ್ರೆಸ್ ಅಭ್ಯರ್ಥಿ ನಮನ್ ಬಿಕ್ಸಲ್ ಕೊಂಗಾರಿಯವರು ಬಿಜೆಪಿಯ ಬಸಂತ್ ಸೊರೆಂಗ್ ರನ್ನು 9,658 ಮತಗಳಿಂದ ಮಣಿಸಿದ್ದಾರೆ. ಕೊಂಗಾರಿ 40,343 ಮತಗಳನ್ನು ಗಳಿಸಿದರು. ಈ ಮೂಲಕ ಬಿಜೆಪಿಯನ್ನು ಮತ್ತೊಮ್ಮೆ ಕಾಂಗ್ರೆಸ್​ ಸೋಲಿಸಿದೆ ಎನ್ನಲಾಗಿದೆ.

ಇತ್ತೇಚೆಗೆ ನಡೆದಿದ್ದ ಐದು ರಾಜ್ಯಗಳ ಚುನಾವಣೆ ಪೈಕಿ ಮೂರರಲ್ಲಿ ಕಾಂಗ್ರೆಸ್​ ಗೆದ್ದಿತ್ತು. ಭಾರೀ ಕುತೂಹಲ ಮೂಡಿಸಿದ್ದ ತೆಲಂಗಾಣ ಚುನಾವಣೆಗೆ ಇದೇ ಡಿಸೆಂಬರ್.7 ರಂದು ಮತದಾನ ನಡೆಯಿತು. ಹಾಗೆಯೇ ಡಿ.11 ರಂದು ಫಲಿತಾಂಶ ಪ್ರಕಟವಾಗಿದ್ದು, ಟಿಡಿಪಿ-ಕಾಂಗ್ರೆಸ್ ಮೈತ್ರಿಯ ಎದುರು ಸಿಎಂ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ(ಟಿರ್​​ಎಸ್​​) ನಿರೀಕ್ಷೆಗೂ ಮೀರಿ ಗೆಲುವು ದಾಖಲಿಸಿತ್ತು. ಟಿಆರ್​ಎಸ್​​ ಪಕ್ಷವನ್ನು ಸೋಲಿಸಲು ಮುಂದಾಗಿದ್ದ ಕಾಂಗ್ರೆಸ್-ಟಿಡಿಪಿ ನೇತೃತ್ವದ ಮಹಾಕೂಟಮಿಗೆ ಮುಖಭಂಗವಾಗಿದೆ. ಈ ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ, ಟಿಆರ್​​ಎಸ್​​ 88, ಕಾಂಗ್ರೆಸ್ ಮೈತ್ರಿಕೂಟ 21, ಬಿಜೆಪಿ 1, ಎಂಐಎಂ 7 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

ಮಧ್ಯಪ್ರದೇಶದಲ್ಲಿಯೂ ಇದೇ ಡಿ.7 ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಿತು. ಈಗಾಗಲೇ ಫಲಿತಾಂಶ ಹೊರಬಿದ್ದಿದೆ. ಹಾವು ಏಣಿ ಆಟದಂತಿದ್ದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಒಟ್ಟು 230 ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ ಪಾಲಿಗೆ 114, ಬಿಜೆಪಿ ತೆಕ್ಕೆಗೆ 109 ಸ್ಥಾನ ಲಭಿಸಿವೆ. ಬಿಜೆಪಿ ಭದ್ರಕೋಟೆಯೆಂದೇ ಹೇಳಲಾಗುವ ರಾಜ್ಯದಲ್ಲಿ ಕಾಂಗ್ರೆಸ್ ಮೋದಿ ಪಡೆಗೆ ಸೆಡ್ಡು ಹೊಡೆದಿದೆ.

ರಾಜಸ್ಥಾನದಲ್ಲೂ ಆಢಳಿತಾರೂಢ ಬಿಜೆಪಿಗೆ ಮುಖಭಂಗವಾಗಿದೆ. ಪ್ರತಿಬಾರಿಯಂತೆ ಈ ಬಾರಿಯು ಆಢಳಿತಾರೂಢ ಪಕ್ಷದ ವಿರುದ್ಧ ಜನ ಮತ ಚಲಾಯಿದ್ದಾರೆ. ಡಿ. 7ರಂದು ನಡೆದಿದ್ದ ಚುನಾವಣೆ ಬಳಿಕ ಮತದಾನೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗದ್ದುಗೆ ಹಿಡಿಯುವ ಸೂಚನೆ ನೀಡಿತ್ತು. ಅದರಂತೆಯೇ ಇದೀಗ ಕಾಂಗ್ರೆಸ್ 99 ಸೀಟು ಗೆಲ್ಲುವ ಮೂಲಕ ಬಿಎಸ್ಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಇನ್ನು 199 ಪೈಕಿ ಬಿಜೆಪಿಗೆ 73, ಬಿಎಸ್ಪಿ 6, ಇತರೆ 20 ಸೀಟುಗಳನ್ನು ಗೆದ್ದಿವೆ.

ಐದು ರಾಜ್ಯಗಳಂತೆಯೇ ಛತ್ತೀಸ್ಗಡ ಚುನಾವಣೆ ಫಲಿತಾಂಶವೂ ಡಿಸೆಂಬರ್.11 ರಂದೇ ಹೊರಬಿದ್ದಿದೆ. ಡಿಸೆಂಬರ್ 7 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಎದುರು ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಹಿಂದುಳಿದ ಸಮುದಾಯಗಳ ಮತಗಳಿಂದಾಗಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. 90 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 68 ಸೀಟುಗಳನ್ನು ಗೆದ್ದಿದೆ. ಕಳೆದ 15 ವರ್ಷಗಳಿಂದ ಅಧಿಕಾರಲಿದ್ದ ಬಿಜೆಪಿ ಕೇವಲ 15 ಕ್ಷೇತ್ರಗಳಲ್ಲಿ ಗೆದ್ದಿದ್ದು, ಹೀನಾಯ ಸೋಲು ಅನುಭವಿಸಿದೆ.

Comments are closed.