ರಾಷ್ಟ್ರೀಯ

ಆರ್ ಬಿಐ-ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟ: ಕೊನೆಗೂ ಗೌರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ

Pinterest LinkedIn Tumblr

ಮುಂಬೈ: ಎನ್ ಪಿಎ ಹಾಗೂ ಆರ್ ಬಿಐ ಸೆಕ್ಷನ್ 7 ರ ಸಂಬಂಧ ಆರ್ ಬಿಐ-ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟದ ನಡುವೆ ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದಾರೆ.

ಕಳೆದ ತಿಂಗಳು ಎನ್ ಪಿಎ ಗೆ ಸಂಬಂಧಿಸಿದಂತೆ ಆರ್ ಬಿಐ ಹಾಗೂ ಸರ್ಕಾರದ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿತ್ತು. ಆರ್ ಬಿಐ ಗೆ ಸರ್ಕಾರ ನಿರ್ದೇಶನ ನೀಡುವುದಕ್ಕೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದವು. ಈ ನಡುವೆ ಅಪಾಯ ಇದ್ದರೂ ಸುಲಭ ಸಾಲಕ್ಕಾಗಿ ಆರ್ ಬಿಐ ಮೇಲೆ ಒತ್ತಡ ಹೇರಿದರೆ ಆರ್ ಬಿಐ ಗೌರ್ನರ್ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿಯದೇ ರಾಜೀನಾಮೆ ನೀಡಲಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು.

ಇತ್ತೀಚಿನ ವರದಿಯ ಪ್ರಕಾರ ಆರ್ ಬಿಐ ಗೌರ್ನರ್ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ.

Comments are closed.