ರಾಷ್ಟ್ರೀಯ

ಮೋದಿ ಅಧಿಕಾರಕ್ಕೆ ಬಂದು 1654 ದಿನ, ಒಂದೂ ಸುದ್ದಿಗೋಷ್ಠಿ ಇಲ್ಲ: ರಾಹುಲ್‌

Pinterest LinkedIn Tumblr


ಹೈದರಾಬಾದ್‌: ಪ್ರಧಾನಿ ನರೇಂದ್ರ ಮೋದಿ ಸಾಧ್ಯವಿದೆ ಎಂದಾದರೆ ಒಂದು ಸುದ್ದಿಗೋಷ್ಠಿ ನಡೆಸಿ, ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸವಾಲು ಹಾಕಿದ್ದಾರೆ.

ಹೈದರಾಬಾದ್‌ನಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 1654 ದಿನಗಳಾಗಿವೆ. ಈ ವರೆಗೆ ಅವರು ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ಸಾರ್ವಜನಿಕರ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಬೇಕು ಎಂದು ರಾಹುಲ್‌ ಸವಾಲೆಸೆದರು.

ಈ ಹಿಂದೆ ಬಿಜೆಪಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಸೈಲೆಂಟ್‌ ಪ್ರಧಾನಿ ಎಂದು ಲೇವಡಿ ಮಾಡುತ್ತಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್‌ ಇದೀಗ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.

ಟ್ವಿಟರ್‌ನಲ್ಲೂ ಈ ಕುರಿತು ಪೋಸ್ಟ್‌ ಮಾಡಿರುವ ರಾಹುಲ್‌ ಗಾಂಧಿ, ಚುನಾವಣಾ ಪ್ರಚಾರಗಳು ಮುಗಿದಿವೆ. ನಿಮ್ಮ ಅರೆಕಾಲಿಕ ಹುದ್ದೆಯಾಗಿರುವ ಪ್ರಧಾನ ಮಂತ್ರಿ ಸ್ಥಾನದಲ್ಲಿ ಇನ್ನು ಸ್ವಲ್ಪ ಕೆಲಸ ಮಾಡುವುದು ಒಳಿತು. ಏತನ್ಮಧ್ಯೆ, ನಿಮ್ಮ 1654 ದಿನಗಳ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ಬಾರಿ ಸುದ್ದಿಗೋಷ್ಠಿಯನ್ನೇ ನಡೆಸಿಲ್ಲವಲ್ಲ ಎಂದು ಲೇವಡಿ ಮಾಡಿದ್ದಾರೆ.

Comments are closed.