ರಾಷ್ಟ್ರೀಯ

ಎಚ್‍ಐವಿ ಅಂತ ಉದ್ಯೋಗದಿಂದ ತೆಗೆದ ಮಹಿಳೆಗೆ ಈಗ ಅದೇ ಕಂಪೆನಿಯಲ್ಲಿ ಕೆಲಸ

Pinterest LinkedIn Tumblr


ಪುಣೆ: ಎಚ್‍ಐವಿ ಪೀಡಿತ ಓರ್ವ ಮಹಿಳೆಗೆ ಮೂರು ವರ್ಷಗಳ ಬಳಿಕ ನ್ಯಾಯ ಸಿಕ್ಕಿದೆ. ಪುಣೆ ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಎಚ್‌ಐವಿ ಇದೆ ಎಂದು ತಿಳಿದ ಕಂಪೆನಿ ಅವರನ್ನು ಕೆಲಸದಿಂದ ತೆಗೆದು ಹಾಕಿತ್ತು. ಕಂಪನಿಯ ಧೋರಣೆ ವಿರುದ್ಧ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು.

ಇದೀಗ ಮೂರು ವರ್ಷಗಳ ಬಳಿಕ ಸಂತ್ರಸ್ತೆ ಪರವಾಗಿ ಕೋರ್ಟ್ ತೀರ್ಪು ನೀಡಿದೆ. 2015ರಲ್ಲಿ ಎಚ್‍ಐವಿ ಇರುವ ಮಹಿಳೆಯನ್ನು ಕೂಡಲೆ ಉದ್ಯೋಗಕ್ಕೆ ಸೇರಿಸಿಕೊಳ್ಳಬೇಕೆಂದು, ರಾಜೀನಾಮೆ ನೀಡುವಂತೆ ಮಾಡಿದ್ದಕ್ಕೆ ಮೂರು ವರ್ಷಗಳ ವೇತನವನ್ನೂ ಕೊಡಬೇಕೆಂದು ಕೋರ್ಟ್ ಕಂಪೆನಿಗೆ ಆದೇಶಿಸಿದೆ.

“ತನಗೆ ಎಚ್‍ಐವಿ ಸೋಂಕು ತನ್ನ ಗಂಡನಿಂದ ಬಂದಿತ್ತು. ವೈದ್ಯಕೀಯ ಚಿಕಿತ್ಸೆಗಾಗಿ ಈ ಪತ್ರಗಳನ್ನು ನನ್ನ ಕಂಪನಿಗೆ ತೋರಿಸಿದ್ದೆ. ಕೇವಲ 30 ನಿಮಿಷಗಳಲ್ಲಿ ಅವರು ರಾಜೀನಾಮೆ ಕೊಡುವಂತೆ ಒತ್ತಾಯ ಮಾಡಿದ್ದರು. ಆ ಕಂಪೆನಿಯಲ್ಲಿ ಕಳೆದ ಐದು ವರ್ಷಗಳಿಂದ ನಾನು ಕೆಲಸ ಮಾಡುತ್ತಿದ್ದೆ” ಎಂದಿದ್ದಾರೆ ಸಂತ್ರಸ್ತೆ.

ಉದ್ಯೋಗ ಬಿಡಲು ನಾವು ಒತ್ತಡ ಹೇರಲಿಲ್ಲ. ಅವರಷ್ಟಕ್ಕೇ ಉದ್ಯೋಗ ಬಿಟ್ಟಿದ್ದರು ಎಂದು ಕಂಪೆನಿ ವಾದ ಮಂಡಿಸಿದ್ದಾಗಿ ಸಂತ್ರಸ್ತೆ ಪರ ವಕೀಲರು ತಿಳಿಸಿದ್ದಾರೆ.

Comments are closed.