ರಾಷ್ಟ್ರೀಯ

ಹಿಂದುತ್ವ ಶಕ್ತಿಗಳನ್ನು ನಿಯಂತ್ರಿಸಲು ಮೋದಿಗೆ ಭಾರೀ ಒತ್ತಡ

Pinterest LinkedIn Tumblr


ವಾಷಿಂಗ್ಟನ್(ಡಿ.02): ತೀವ್ರವಾದಿ ಹಿಂದುತ್ವದ ಬೆಳವಣಿಗೆ ತಡೆಯುವಂತೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಭಾರತದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನವನ್ನು ತಡೆಯಬೇಕೆಂದು ಆಗ್ರಹಿಸಿದ್ದು, ಇಂತಹ ದೌರ್ಜನ್ಯಗಳನ್ನು ಖಂಡಿಸಲು ಕರೆ ನೀಡಿದ್ದಾರೆ.

ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಎಂಬ ಶೀರ್ಷಿಕೆಯಡಿ ವಾಷಿಂಗ್ಟನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಕಾಂಗ್ರೆಸ್, ಅಮೆರಿಕದಲ್ಲಿರುವ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಹಾಗೂ ಸಿವಿಲ್ ಸೊಸೈಟಿ ಸದಸ್ಯರು ಭಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ತೀವ್ರವಾದಿಗಳನ್ನು ಖಂಡಿಸದೇ ಇರುವುದು, ಭಾರತದ ಇಂದಿನ ಸ್ಥಿತಿಗೆರ ಕಾರಣ ಎಂದು ಸಭೆಯಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ತೀವ್ರವಾದಿ ಹಿಂದುತ್ವ ಸಂಘಟನೆಗಳ ಬೆಳವಣಿಗೆಯನ್ನು ತಡೆಯಲು ಹಾಗೂ ತೀವ್ರವಾದಿ ಹಿಂದುತ್ವದ ಮೂಲಕ ದೌರ್ಜನ್ಯದಲ್ಲಿ ತೊಡಗಿರುವವರಿಗೆ ಅಂಕುಶ ಹಾಕಬೇಕೆಂದು ಪ್ರಧಾನಿ ಮೋದಿ ಅವರನ್ನು ಆಯೋಗ ಒತ್ತಾಯಿಸಿದೆ.

Comments are closed.