ರಾಷ್ಟ್ರೀಯ

ರೈತರು ಕಿಸಾನ್ ಮುಕ್ತಿ ಮಾರ್ಚ್ ಹಮ್ಮಿಕೊಳ್ಳಲು ಕಾರಣವೇನು ಗೊತ್ತೇ?

Pinterest LinkedIn Tumblr


ನವದೆಹಲಿ: ಲಕ್ಷಾಂತರ ರೈತರು ದೇಶದ ವಿವಿಧ ಭಾಗಗಳಿಂದ ದೆಹಲಿ ರಾಮಲೀಲಾ ಮೈದಾನದಿಂದ ಸಂಸದ ಮಾರ್ಗವರೆಗೆ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ.ಈ ಎರಡು ದಿನದ ದಿಲ್ಲಿ ಚಲೋದಲ್ಲಿ ರೈತರು ಎರಡು ಪ್ರಮುಖ ಬೇಡಿಕೆಗಳಿಗಾಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸಲಿದ್ದಾರೆ.

ಒಂದು: ದೇಶದ ಕೃಷಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು 21ದಿನಗಳ ಕಾಲ ವಿಶೇಷ ಸಂಸತ್ ಜಂಟಿ ಅಧಿವೇಶನವನ್ನು ಕರೆಯಬೇಕು

ಎರಡನೆಯದು: ನವಂಬರ್ 2017ರಲ್ಲಿ ನಡೆದ ಕಿಸಾನ್ ಸಂಸದ್ ನಲ್ಲಿ ಸಿದ್ದಪಡಿಸಲಾದ ಎರಡು ಕಿಸಾನ್ ಮುಕ್ತಿ ಮಸೂದೆಗಳನ್ನು ಸಂಸತ್ ನಲ್ಲಿ ಜಾರಿಗೆ ತರಬೇಕು. ಆ ಮೂಲಕ ,ಸಾಲ,ನ್ಯಾಯಯುತ ಬೆಲೆ, ವೇತನ, ಉದ್ಯೋಗ, ಒಳ್ಳೆಯ ಶಿಕ್ಷಣ, ಆರೋಗ್ಯ ರಕ್ಷಣೆ, ಪೋಷಣೆಯ ಭದ್ರತೆ ನೀಡುವಂತಾಗಬೇಕು. ಅಲ್ಲದೆ ಎಂಎಸ್ ಸ್ವಾಮಿನಾಥನ್ ವರದಿಯನ್ನು ಸಹ ಜಾರಿಗೆ ತರಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ಕಿಸಾನ್ ಸಂಸದ್ ಸಿದ್ದಪಡಿಸಿದ ಎರಡು ಮಸೂದೆಗಳು:

*ರೈತರ ಋಣಭಾರ ಮುಕ್ತ ಸ್ವಾತಂತ್ರ್ಯ ಮಸೂದೆ-2018
*ರೈತರ ಕೃಷಿ ಸರಕುಗಳಿಗೆ ಕನಿಷ್ಠ ಬೆಂಬಲ ಬೆಲೆ ಸ್ವಾತಂತ್ರ್ಯ ಮಸೂದೆ-2018

ಈ ಚಳುವಳಿ ರೂಪುಗೊಂಡಿದ್ದು ಹೇಗೆ?

*ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು ಈ ಕಿಸಾನ್ ಮುಕ್ತಿ ಮಾರ್ಚ್ ಮೂಲಕ ದಿಲ್ಲಿ ಚಲೋ ಚಳುವಳಿಯನ್ನು ಹಮ್ಮಿಕೊಂಡಿದೆ.ಈ ಸಮಿತಿ ಅಡಿಯಲ್ಲಿ ಸುಮಾರು 180ಕ್ಕೂ ಅಧಿಕ ರೈತ ಸಂಘಟನೆಗಳು ಒಳಗೊಂಡಿವೆ.

*ಈಗಾಗಲೇ ಕಿಸಾನ್ ಮುಕ್ತಿ ಮಸೂದೆಗಳಿಗೆ 21 ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.

*ಕೇವಲ ಮೂರು ತಿಂಗಳ ಅವಧಿಯಲ್ಲಿ ಎಲ್ಲ ಭಾಗದ ರೈತರು ಚಳುವಳಿಗಾಗಿ ದೆಹಲಿ ಬಂದಿಳಿದಿದ್ದಾರೆ.

*ಈ ಕೃಷಿ ಬಿಕ್ಕಟ್ಟು ಕಾಲ್ಪನಿಕವಲ್ಲ, ಇದು ನಾವು ಸೇವಿಸುವ ಆಹಾರದಷ್ಟೇ ಸತ್ಯ,ಈ ಬಿಕ್ಕಟ್ಟು ಕೇವಲ ಒಂದು ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ ಇದು ಎಲ್ಲ ವಲಯಕ್ಕೋ ವಿಸ್ತರಿಸಿದೆ ಎನ್ನುತ್ತಿವೆ ರೈತ ಸಂಘಟನೆಗಳು.

*ವಾರಾಂತ್ಯದಲ್ಲಿ ಪರ್ಯಾಯ ಆಹಾರದ ನೆಟ್ ವರ್ಕ್ ಗಳೆಲ್ಲವೂ ಸಹಿತ ಉತ್ತಮವಾಗಿವೆ. ಆದರೆ ಅವೆಲ್ಲವೂ ಕೂಡ ಕೇವಲ ಫ್ಯಾಶನ್ ಗೆ ಸೀಮಿತ. ಅವುಗಳೆಂದಿಗೂ ಕೂಡ ಈ ಬೃಹತ್ ರಾಷ್ಟ್ರದ ಜನರ ಹೊಟ್ಟೆಯನ್ನು ತುಂಬಿಸುವುದಿಲ್ಲ.

*ರೈತರು ಹೇಳುವಂತೆ ತಮಗೆ ನೀಡಿರುವ ಭರವಸೆಗಳೆಲ್ಲವು ಸಹಿತ ಈಡೇರದೆ ಹೋಗಿವೆ. ಕೃಷಿ ಕ್ಷೇತ್ರವನ್ನು ಬೃಹತ್ ಉದ್ಯಮಿಗಳು ನಿಯಂತ್ರಿಸುತ್ತಿದ್ದಾರೆ. ಈ ಬಿಕ್ಕಟ್ಟು ಬಹಳ ವರ್ಷಗಳಿಂದಲೂ ನಡೆದು ಬಂದಿದೆ. ಕಳೆದ ಎರಡು ದಶಕಗಳಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಈ ಬಗ್ಗೆ ಸರ್ಕಾರ ಗಮನ ವಹಿಸುತ್ತಿಲ್ಲ ಎನ್ನುತ್ತಿವೆ ರೈತ ಸಂಘಟನೆಗಳು.

*ಈ ಕಾರಣಕ್ಕಾಗಿ ರೈತರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದರ ಮೂಲಕ ರೈತರು ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

Comments are closed.