ಕರ್ನಾಟಕ

ಮಹಿಳೆ ಹೊಟ್ಟೆಯಲ್ಲಿ 12 ಕೆಜಿ ಗಡ್ಡೆ !

Pinterest LinkedIn Tumblr


ಮೈಸೂರು: ಮಹಿಳೆ ಹೊಟ್ಟೆಯಲ್ಲಿದ್ದ ಭಾರಿ ಗಾತ್ರದ ಗಡ್ಡೆಯನ್ನು ಎರಡು ಗಂಟೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಂತಿನಗರದ ಸಲ್ಮಾ (47) ಅವರ ಹೊಟ್ಟೆಯಲ್ಲಿ ಬೆಳೆದಿದ್ದ 12 ಕೆಜಿ ತೂಕದ ಗಡ್ಡೆ (ದುರ್ಮಾಂಸ) ಯನ್ನು ನಗರದ ಶ್ರೀದೇವಿ ನರ್ಸಿಂಗ್ ಹೋಂ ವೈದ್ಯ ಡಾ.ಬಿ.ಡಿ.ದೇವರಾಜ್ ನೇತೃತ್ವದ ತಂಡ ಹೊರ ತೆಗೆದಿದೆ.
ಮನೆ ಕೆಲಸ ಮಾಡಿಕೊಂಡಿದ್ದ ಸಲ್ಮಾ ಅವರಿಗೆ ಇತ್ತೀಚೆಗೆ ಹೊಟ್ಟೆ ದಪ್ಪವಾಗುತ್ತಾ ಬರುತ್ತಿದ್ದಲ್ಲದೇ ನೋವು ಕಾಣಿಸಿಕೊಂಡಿದೆ. ನೋವು ಹೆಚ್ಚಾಗಿದ್ದರಿಂದ ವೈದ್ಯರಲ್ಲಿ ತಪಾಸಣೆ ನಡೆಸಿ ಸ್ಕಾೃನಿಂಗ್ ಮಾಡಿದಾಗ ದೊಡ್ಡ ಗಾತ್ರದ ಗಡ್ಡೆ ಇರುವುದು ಕಂಡು ಬಂದಿದೆ.
ಬಡ ಕುಟುಂಬದ ಹಿನ್ನೆಲೆಯನ್ನು ತಿಳಿದು ಆಸ್ಪತ್ರೆ ವೈದ್ಯರು ರಿಯಾಯಿತಿಯಲ್ಲಿ ಶುಕ್ರವಾರ ಶಸ್ತ್ರಚಿಕಿತ್ಸೆ ನೆರವೇರಿಸಿ ಗಡ್ಡೆ ಹೊರ ತೆಗೆದಿದ್ದು, ಮಹಿಳೆ ಅಪಾಯದಿಂದ ಪಾರಾಗಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Comments are closed.