ರಾಷ್ಟ್ರೀಯ

ಮಾಲ್​ನಲ್ಲಿ ಮಗುವಿಗೆ ಹಾಲುಣಿಸಲು ಅಮ್ಮಂದಿರಿಗೆ ಪ್ರತ್ಯೇಕ ಕೋಣೆ ಅಸಾಧ್ಯ ಎಂದ ಮಾಲ್​ ಸಿಬ್ಬಂದಿ

Pinterest LinkedIn Tumblr

ಕೊಲ್ಕತ್ತಾ (ನ.30): ಏಳು ತಿಂಗಳ ಮಗುವಿನೊಂದಿಗೆ ಮಾಲ್​ಗೆ ಹೋದ ಮಹಿಳೆಯೊಬ್ಬಳು ಅಲ್ಲಿ ಮಗುವಿಗೆ ಹಾಲು ಕುಡಿಸಲು ಸೂಕ್ತ ಸ್ಥಳವಿಲ್ಲದೇ ಕಡೆಗೆ ಶೌಚಾಲಯದಲ್ಲಿ ಹಾಲು ಕುಡಿಸಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಕೊಲ್ಕತ್ತಾದ ಸಿಟಿ ಮಾಲ್​ ಕುರಿತು ಅಭಿಲಾಶಾ ದಾಸ್​ ಅಧಿಕಾರಿ ಎಂಬುವವರು ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡು ಮಾಲ್​ಗೆ ಟ್ಯಾಗ್​ ಮಾಡಿದ್ದರು.

ಈ ಅವರ ಸಲಹೆಗೆ ಮಾಲ್​ನ ಸಾಮಾಜಿಕ ಜಾಲತಾಣದ ಸಿಬ್ಬಂದಿಗಳು ನೀಡಿದ ಉತ್ತರ ಮಾತ್ರ ನಿಜಕ್ಕೂ ಮಹಿಳೆ ಸೇರಿದಂತೆ ಪ್ರತಿಯೊಬ್ಬರನ್ನು ಬೆಚ್ಚಿ ಬೀಳಿಸುವಂತೆ ಇತ್ತು. “ಮನೆಯ ಕೆಲಸ ಮನೆಯಲ್ಲಿಯೇ ಮಾಡಬೇಕು. ಮಾಲ್​ನಲ್ಲಿ ಅಲ್ಲ. ಹಾಲುಣಿಸುವುದು ಮಹಿಳೆಯ ಸಮಸ್ಯೆ ಇದು ಚಿಲ್ಲರೆ ಕೆಲಸ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಮಾಲ್​ ಸಿಬ್ಬಂದಿಗಳ ಈ ದುರ್ವತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ಕೂಡ ವ್ಯಕ್ತವಾಗಿದೆ. ಮಹಿಳೆಯ ಪರ ನಿಂತ ಸಾರ್ವಜನಿಕರು, ಎದೆಹಾಲುಣಿಸುವುದು ಮಹಿಳೆಯರ ಹಕ್ಕು.. ಇದಕ್ಕಾಗಿ ನಾವು ಅವರಿಗೆ ಅವಕಾಶ ಕಲ್ಪಿಸಬೇಕು. ಆಕೆ ಎಲ್ಲಿಬೇಕಾದರೂ ಯಾವಾಗ ಬೇಕಾದರೂ ತನ್ನ ಮಗುವಿಗೆ ಹಾಲುಣಿಸುವ ಸ್ವತಂತ್ರವನ್ನು ಪಡೆದಿದ್ದಾರೆ. ಆದರೆ ಆ ಅವಕಾಶವನ್ನು ನೀಡುವಲ್ಲಿ ವಿಫಲರಾಗಿದ್ದೀರಾ ಎಂದು ಟೀಕಿಸಿದ್ದಾರೆ.

ಸಿಬ್ಬಂದಿಗಳ ಈ ಒರಟು ನಡುವಳಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿದ್ದ ಟೀಕೆಯಿಂದ ಎಚ್ಚೆತ್ತ ಸೌತ್​ ಸಿಟಿ ಮಾಲ್​ ಉಪಾಧ್ಯಕ್ಷರು ಮಹಿಳೆಯ ಕ್ಷಮೆ ಕೋರಿದ್ದಾರೆ. ಪೋಷಕರ ಅವಶ್ಯಕತೆಗಳನ್ನು ಪೂರೈಸುವುದು ನಮ್ಮ ಕರ್ತವ್ಯ. ನಮ್ಮ ಸಿಬ್ಬಂದಿ ಈ ಬಗ್ಗೆ ಅರಿವಿಲ್ಲದೇ ಈ ರೀತಿಯಾಗಿ ನಿಮಗೆ ಮನನೋಯಿಸುವ ಸಂದೇಶ ಮಾಡಿದ್ದಾರೆ. ಆದರೆ ನಮ್ಮಿಂದ ತಪ್ಪಾಗಿದೆ. ಅದನ್ನು ಕ್ಷಮಿಸಿ. ಈ ಬಗ್ಗೆ ನಾವು ಕಕ್ರಮಕ್ಕೆ ಮುಂದಾಗುತ್ತೇವೆ ಎಂದಿದ್ದಾರೆ.

ಅಷ್ಟೇ ಅಲ್ಲದೇ ಮಾಲ್​ ಇನ್ನು ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲೇ ಮಕ್ಕಳಿಗೆ ಹಾಲುಣಿಸಲು, ಬಟ್ಟೆ ಬದಲಾಯಿಸಲು, ಮಕ್ಕಳ ಶೌಚಾಲಯ ಸೇರಿದಂತೆ ಸಕಲ ಸೌಲಭ್ಯವನ್ನು ಒದಗಿಸಲಾಗುವುದು.

Comments are closed.