ರಾಷ್ಟ್ರೀಯ

ಮನೆಯಿಂದ ಹೊರಗಿಡುವ ಮೂಡನಂಬಿಕೆಯಿಂದ ಮೈನೆರೆದ 12 ವರ್ಷ ಬಾಲಕಿಯ ಬಲಿ ಪಡೆದ ಗಜ ಚಂಡಮಾರುತ

Pinterest LinkedIn Tumblr


ಚೆನ್ನೈ: ಮೊದಲ ಬಾರಿಗೆ ಮೈನೆರೆದ ಹುಡುಗಿಯನ್ನು ಮನೆಯ ಹೊರಗೆ ಜೋಪಾಡಿ ಹಾಕಿ ಅವರನ್ನು ಕೆಲವು ದಿನಗಳ ಕಾಲ ಕೂರಿಸುವುದು ಸಂಪ್ರದಾಯ ಅನೇಕ ಕಡೆ ಇದೆ, ಅದೇ ಸಂಪ್ರದಾಯದಿಂದಾಗಿ ಈಗ ಬಾಲಕಿಯೊಬ್ಬಳು ಪ್ರಾಣಕಳೆದುಕೊಳ್ಳುವಂತೆ ಆಗಿದೆ.

ಕಳೆದ ವಾರ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಗಜ ಚಂಡಮಾರುತ ಹಲವಾರು ಹಾನಿ ಮಾಡಿತು. ಅದೇ ಗಜ ಚಂಡಮಾರುತಕ್ಕೆ ಈ ಹುಡುಗಿ ಕೂಡ ಬಲಿಯಾಗಿದ್ದಾಳೆ.

ತಂಜಾವೂರಿನ 12 ವರ್ಷದ ವಿಜಯ ಮೊದಲ ಬಾರಿ ಮೈನೆರೆದಿದ್ದಳು. ಸಂಪ್ರದಾಯದಸ್ಥ ಕುಟುಂಬವಾದ ವಿಜಯಳನ್ನು 16 ದಿನಗಳ ಕಾಲ ಮನೆಯ ಹೊರಗೆ ಶೆಡ್​ ಕಟ್ಟಿ ಅಲ್ಲಿಯೇ ಬಿಡಲಾಗಿತು. ಅಲ್ಲಿಯೇ ಆಕೆಯ ತಾಯಿ ಕೂಡ ಮಲಗುತ್ತಿದ್ದಳು.

ಆದರೆ ನ.12ರಂದು ಬೀಸಿದ ಭೀಕರ ಗಜ ಚಂಡಮಾರುತಕ್ಕೆ ಶೆಡ್​ ಮೇಲಿದ್ದ ತೆಂಗಿನ ಮರ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಶೆಡ್​ ಜಗಂ ಆಗಿ, ಬಾಲಕಿ ಸಾವನ್ನಪ್ಪಿದ್ದಾಳೆ. ಆಕೆಯ ತಾಯಿ ಕೂಡ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ನ್ಯೂಸ್​ ಮಿನಟ್​ ವರದಿ ಮಾಡಿದೆ.

ಡಿಜಿಟಲ್​ ಯುಗಕ್ಕೆ ಕಾಲಿಟ್ಟರು ತಮಿಳುನಾಡು ರಾಜ್ಯದಲ್ಲಿ ಇನ್ನು ಕೂಡ ಈ ರೀತಿ ಸಂಪ್ರದಾಯವನ್ನು ಅನೇಕ ಕುಟುಂಬಗಳನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಸಂಪ್ರದಾಯ ಪಾಲನೆ ನಿಯಮದ ಆಧಾರದ ಮೇಲೆ ಹುಡಿಗಿಯರು ವಯಸ್ಸಿಗೆ ಬರುತ್ತಿದ್ದಂತೆ ಅವರನ್ನು ಮನೆ ಹೊರಗೆ ಕೂರಿಸಿ ಕೆಲವು ಸಂಪ್ರದಾಯ ಪದ್ದತಿ ಆಚರಿಸಲಾಗುತ್ತದೆ.

ಈ ಕುರಿತು ಬಿಬಿಸಿ ಜೊತೆ ಮಾತನಾಡಿರುವ ವಿಜಯ ಅಜ್ಜಿ, ಈ ದೊಡ್ಡ ತೆಂಗಿನ ಮರ ನಮ್ಮ ಮನೆಯ ಮೇಲೆ ಬೀಳುವ ಸಾಧ್ಯತೆ ಇರಲಿಲ್ಲ. ಆದರೆ ಚಂಡಮಾರುತದ ಅಬ್ಬರದಿಂದಾಗಿ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ನಿಜಕ್ಕೂ ಆಘಾತ ಮೂಡಿಸಿದೆ, ನಾವು ಮರವನ್ನು ತೆಗೆದು ಜೋಪಾಡಿಯಲ್ಲಿದ್ದ ಬಾಲಕಿಯನ್ನು ರಕ್ಷಿಸಲು ಮುಂದಾದೇವು ಆದರೆ, ಸಮಯ ಮೀರಿತು ಎಂದಿದ್ದಾರೆ.

ಈ ಘಟನೆ ಬಗ್ಗೆ ಮಾತನಾಡಿರುವ ಅವೆರ್​ ಇಂಡಿಯಾ ಮುಖ್ಯಸ್ಥ ಈ ಘಟನೆ ಚಂಡಮಾರುತದಿಂದ ಘಟಿಸಿಲ್ಲ. ಬದಲಾಗಿ ಸಂಪ್ರದಾಯದ ಅಂಧ ಆಚರಣೆಯಿಂದ ನಡೆದಿದೆ. ಈ ಬಗ್ಗೆ ಇನ್ನಾದರೂ ಜನರು ಎಚ್ಚೆತ್ತುಕೊಳ್ಳಬೇಕು ಎಂದರು.

Comments are closed.