ರಾಷ್ಟ್ರೀಯ

ಪಂಜಾಬ್ ಗಡಿಯಿಂದ ಭಾರತದೊಳಗೆ ನುಸುಳಿರುವ ಇಬ್ಬರು ಶಂಕಿತ ಉಗ್ರರ ಭಾವಚಿತ್ರ ಬಿಡುಗಡೆ ಮಾಡಿದ ಪೊಲೀಸರು!

Pinterest LinkedIn Tumblr

ನವದೆಹಲಿ: ಪಂಜಾಬ್ ಗಡಿಯಿಂದ ಭಾರತದೊಳಗೆ ನುಸುಳಿರುವ ಇಬ್ಬರು ನಟೋರಿಯಸ್ ಉಗ್ರರ ಭಾವಚಿತ್ರವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದು, ದೆಹಲಿಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ವರಿಷ್ಠಾಧಿಕಾರಿಗಳು, ಪಂಜಾಬ್ ಪ್ರಾಂತ್ಯದಿಂದ ಇಬ್ಬರು ಉಗ್ರರು ನುಸುಳಿದ್ದಾರೆ. ಪ್ರಸ್ತುತ ರಾಷ್ಟ್ರರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದು, ಈಗಾಗಲೇ ರಾಜಧಾನಿ ತಲುಪಿರುವ ಶಂಕೆ ಇದೆ. ಹೀಗಾಗಿ ಸಾರ್ವಜನಿಕರ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.

ಅಂತೆಯೇ ಯಾರ ಬಗ್ಗೆಯಾದರೂ ಶಂಕೆ ವ್ಯಕ್ತವಾದರೆ ಪಹರ್ ಗಂಜ್ ಪೊಲೀಸ್ ಠಾಣೆಯ 011-23520787 ಮತ್ತು 011-2352474 ಈ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ಪಂಜಾಬ್ ಪೊಲೀಸರು ದೆಹಲಿಯಿಂದ ಸುಮಾರು 360 ಕಿ.ಮೀ ದೂರದಲ್ಲಿರುವ ಪಂಜಾಬ್ ಫಿರೋಜ್ ಪುರ ಗಡಿ ಮೂಲಕ ಇಬ್ಬರು ಉಗ್ರರು ಭಾರತದೊಳಗೆ ನುಸುಳಿದ್ದಾರೆ ಎಂದು ಹೇಳಿದ್ದರು. ನುಸುಳಿರುವ ಇಬ್ಬರೂ ಉಗ್ರರು ಕುಖ್ಯಾತ ಜೈಷ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದ ಉಗ್ರರು ಎಂದು ಹೇಳಿದ್ದರು.

Comments are closed.