ರಾಷ್ಟ್ರೀಯ

ಚಲಿಸುವ ಬಸ್ಸಿನಲ್ಲಿ ಯುವತಿಯ ಎದುರು ಹಸ್ತಮೈಥುನ ಮಾಡಿದ ವ್ಯಕ್ತಿ ! ಮುಂದೆ ಏನಾಯಿತು ನೋಡಿ …

Pinterest LinkedIn Tumblr

ನವದೆಹಲಿ: ಚಲಿಸುವ ಬಸ್ಸಿನಲ್ಲಿ ಯುವತಿಯ ಎದುರು ಹಸ್ತಮೈಥುನ ಮಾಡಿದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಕಪಶೆಡಾದಿಂದ ವಸಂತ್ ಗಂಜ್’ಗೆ ಯುವತಿ ಬಸ್ಸಿನಲ್ಲಿ ತೆರಳುತ್ತಿದ್ದಳು. ಈ ವೇಳೆ ಯುವತಿ ಎದುರು ನಿಂತ ವ್ಯಕ್ತಿ ಇದ್ದಕ್ಕಿದ್ದಂತೆ ಹಸ್ತಮೈಥುನ ಮಾಡಿದ್ದಾನೆ.

ವ್ಯಕ್ತಿ ಪದೇ ಪದೇ ಅದೇ ರೀತಿ ಕೆಟ್ಟದಾಗಿ ವರ್ತಿಸುವುದನ್ನು ನೋಡಿದ ಯುವತಿ, ಆತನ ಮೇಲೆ ಕೂಗಾಡಿದ್ದಾಳೆ. ಬಳಿಕ ವ್ಯಕ್ತಿಗೆ ಥಳಿಸಿ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.

ಬಸ್ಸಿನಲ್ಲಿ ವ್ಯಕ್ತಿ ದುರ್ವರ್ತನೆ ತೋರುತ್ತಿದ್ದರೂ, ಯುವತಿಯ ಸಹಾಯಕ್ಕೆ ಯಾರೊಬ್ಬರೂ ಬಂದಿಲ್ಲ. ವ್ಯಕ್ತಿಗೆ ಹೊಡೆಯಲು ಆರಂಭಿಸಿದಾಗಲೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ಯುವತಿ ಹೇಳಿದ್ದಾಳೆ.

Comments are closed.