ರಾಷ್ಟ್ರೀಯ

ನಕ್ಸಲ್ ಜೊತೆ ನಂಟು ಆರೋಪ: ದಿಗ್ವಿಜಯ್ ಸಿಂಗ್ ವಿಚಾರಣೆ ನಡೆಸಲಿರುವ ಪೊಲೀಸ್

Pinterest LinkedIn Tumblr


ಬೆಂಗಳೂರು: ನಿಷೇಧಿತ ಮಾವೋವಾದಿ ಕಮ್ಯೂನಿಸ್ಟ್ ಸಂಘಟನೆಯ ಚಟುವಟಿಕೆಗಳ ತನಿಖೆ ನಡೆಸುತ್ತಿರುವ ಪುಣೆಯ ಪೊಲೀಸರು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ನಕ್ಸಲ್ ಕಾರ್ಯಕರ್ತರಿಂದ ವಶಪಡಿಸಿಕೊಳ್ಳಲಾದ ಪತ್ರಗಳಲ್ಲಿ ದಿಗ್ವಿಜಯ್ ಸಿಂಗ್ ಅವರ ಫೋನ್ ನಂಬರ್ ಪ್ರಸ್ತಾಪವಾಗಿದೆ. ಹೀಗಾಗಿ, ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಪೊಲೀಸರು ದಿಗ್ವಿಜಯ್ ಸಿಂಗ್ ಅವರನ್ನು ವಿಚಾರಣೆ ಮಾಡಲಿದ್ದಾರೆನ್ನಲಾಗಿದೆ.

ವಿದ್ಯಾರ್ಥಿಗಳನ್ನು ಬಳಸಿ ದೇಶವ್ಯಾಪಿ ಪ್ರತಿಭಟನೆ ತೀವ್ರಗೊಳಿಸಲು ಕಾಂಗ್ರೆಸ್ ಮುಖಂಡರು ನೆರವಾಗಲು ಒಪ್ಪಿಕೊಂಡಿದ್ದಾರೆ ಎಂದು ಕಾಮ್ರೇಡ್ ಪ್ರಕಾಶ್ ಎಂಬುವವರು ಕಾಮ್ರೇಡ್ ಸುರೇಂದ್ರ ಅವರಿಗೆ ಪತ್ರದಲ್ಲಿ ತಿಳಿಸಲಾಗಿದೆ. 2017ರ ಸೆ. 25ರ ದಿನಾಂಕವಿರುವ ಈ ಪತ್ರದಲ್ಲಿ ಸಿಂಗ್ ಅವರ ಸೆಲ್ ಫೋನ್ ನಂಬರ್ ಇದೆ.

ಇಲ್ಲಿ ಕಾಮ್ರೇಡ್ ಸುರೇಂದ್ರ ಎಂದರೆ ಜೂನ್​ನಲ್ಲಿ ಬಂಧಿತರಾಗಿದ್ದ ನಾಗಪುರದ ವಕೀಲ ಸುರೇಂದ್ರ ಗಾಡ್ಲಿಂಗ್ ಅವರಿರುವ ಸಾಧ್ಯತೆ ಇದೆ. ಕಾಮ್ರೇಡ್ ಪ್ರಕಾಶ್ ಅವರು ಟಾಪ್ ನಕ್ಸಲ್ ಕಮಾಂಡರ್​ಗಳಲ್ಲೊಬ್ಬರಾಗಿದ್ದಾರೆ.

ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರು ಇತ್ತೀಚೆಗೆ ಹಲವು ಮಂದಿಯನ್ನು ಬಂಧಿಸಿದ್ದರು. ಈ ಬಂಧಿತರಿಗೂ ಟಾಪ್ ನಕ್ಸಲ್ ನಾಯಕತ್ವಕ್ಕೂ ಸಂಬಂಧ ಇರುವುದಕ್ಕೆ ಪುಷ್ಟಿಯಾಗಿ ಪೊಲೀಸರು ನ್ಯಾಯಾಲಯಕ್ಕೆ ಕೊಟ್ಟ ಹಲವು ದಾಖಲೆಗಳಲ್ಲಿ ಈ ಪತ್ರವೂ ಒಂದು. ಈ ಹಂತದಲ್ಲಿ ದಿಗ್ವಿಜಯ್ ಸಿಂಗ್ ವಿರುದ್ಧವೂ ನಕ್ಸಲ್ ನಂಟು ಇರುವ ಆರೋಪ ಕೇಳಿಬಂದಿತ್ತು. ಆಗ ಮಾಜಿ ಮಧ್ಯಪ್ರದೇಶ ಮುಖ್ಯಮಂತ್ರಿಗಳಾದ ದಿಗ್ವಿಜಯ್ ಸಿಂಗ್ ಅವರು, ತಾನು ದೇಶದ್ರೋಹಿ ಅಥವಾ ನಕ್ಸಲ್ ಬೆಂಬಲಿಗನೇ ಆಗಿದ್ದರೆ ಬಂಧಿಸಲಿ ಎಂದು ಸವಾಲು ಹಾಕಿದ್ದರು.

Comments are closed.