ರಾಷ್ಟ್ರೀಯ

ಪೋರ್ನ್ ವೆಬ್‍ಸೈಟಿಗೆ ಹೆಂಡತಿ ಫೋಟೋ, ಪೋನ್ ನಂಬರ್ ಹಾಕ್ದ!

Pinterest LinkedIn Tumblr


ಲಕ್ನೋ: 38 ವರ್ಷದ ವ್ಯಕ್ತಿಯೊಬ್ಬ ಪತ್ನಿಯ ಅಶ್ಲೀಲ ಫೋಟೋ, ಸಂದೇಶ ಮತ್ತು ಫೋನ್ ನಂಬರನ್ನು ಪೋರ್ನ್ ವೆಬ್ ಸೈಟಿಗೆ ಪೋಸ್ಟ್ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡದಲ್ಲಿ ನಡೆದಿದೆ.

ಆರೋಪಿ ಪತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿ ಖಾಸಗಿ ಸಂಸ್ಥೆಯಲ್ಲಿ ಒಬ್ಬ ಸಹಾಯಕ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದನು. ಆರೋಪಿ ಪತ್ನಿ ಪೊಲೀಸರಿಗೆ ದೂರ ಕೊಟ್ಟ ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಮತ್ತು ಸಂತ್ರಸ್ತೆ 2011ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕಳೆದ 10 ತಿಂಗಳಿನಿಂದ ಇಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಈ ಕಾರಣಕ್ಕಾಗಿ ಪತಿ ಆಕೆಯ ಫೋಟೋ ಮತ್ತು ನಂಬರ್ ಪೋಸ್ಟ್ ಮಾಡಿರಬಹುದು. ನಾವು ಪತ್ನಿ ಫೋನಿನಲ್ಲಿ ಫೋಟೋಗಳನ್ನು ಸಂಗ್ರಹಸಿ ಬಳಿಕ ಪ್ರಕರಣದ ತನಿಖೆಯನ್ನು ಪ್ರಾಂರಭಿಸಿದೆವು ಎಂದು ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ಪಂತ್ ಹೇಳಿದ್ದಾರೆ.

ಆರೋಪಿಯ ಮೇಲೆ ನವೆಂಬರ್ 13 ರಂದು ದೂರು ದಾಖಲಾಗಿತ್ತು. ಆದರೆ ಆರೋಪಿ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದನು. ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಆತನ ಇರುವಿಕೆಯ ಬಗ್ಗೆ ಮಾಹಿತಿ ತಿಳಿದು ಬಂಧಿಸಿದ್ದಾರೆ.

ಬಂಧಿತ ಆರೋಪಿಯ ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದೇವೆ. ಬಳಿಕ ತನಿಖೆಯ ಸಮಯದಲ್ಲಿ ಆರೋಪಿ ಎರಡು ಸಿಮ್ ಗಳನ್ನು ಹೊಂದಿದ್ದು, ಒಂದನ್ನು ಪತ್ನಿಯ ಫೋನ್ ನಂಬರ್, ಫೋಟೋಗಳನ್ನು ಪೋರ್ನ್ ವೆಬ್ ಸೈಟಿಗೆ ಕಳುಹಿಸುತ್ತಿದ್ದನು. ಅಷ್ಟೇ ಅಲ್ಲದೇ ಆ ಸಿಮ್ ಕಾರ್ಡ್ ನಿಂದ ಪತ್ನಿಗೂ ಕೂಡ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸದ್ಯಕ್ಕೆ ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 504 ಮತ್ತು 509ರ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Comments are closed.