ರಾಷ್ಟ್ರೀಯ

6 ವರ್ಷದ ನಂತರ ತಾಯಿಯ ಮಡಿಲು ಸೇರಿದ ತಂದೆಯಿಂದ ಮಾರಾಟಗೊಂಡಿದ್ದ ಸಹೋದರರು

Pinterest LinkedIn Tumblr


ಕೃಷ್ಣಗಿರಿ: ತಂದೆಯಿಂದ ಮಾರಾಟಗೊಂಡಿದ್ದ ಗಂಡು ಮಕ್ಕಳಿಬ್ಬರು ಬರೋಬ್ಬರಿ 6 ವರ್ಷದ ಬಳಿಕ ಮರಳಿ ತಾಯಿಯ ಮಡಿಲು ಸೇರಿದ ಹೃದಯಸ್ಪರ್ಶಿ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.

ಕೃಷ್ಣಗಿರಿ ಆದಾಯ ವಿಭಾಗೀಯ ಅಧಿಕಾರಿ (RDO) ಮತ್ತು ರಾಷ್ಟ್ರೀಯ ಆದಿವಾಸಿ ಸಮಾಜವಾದಿ ಕೌನ್ಸಿಲ್ (NASC) ಎಂಬ ಸ್ವಯಂ ಸೇವಾ ಸಂಸ್ಥೆಯ ಸಹಕಾರದಿಂದ ಇದು ಸಾಧ್ಯವಾಗಿದೆ.

11 ವರ್ಷದ ಬಾಲಕ ಅರುಣ್ ಕುಮಾರ್ ಸೋಮವಾರ ತನ್ನ ತಾಯಿ ವಲ್ಲಿಯನ್ನು ಕಂಡು ಓಡಿ ಹೋಗಿ ತಬ್ಬಿದಾಗ RDO ಮತ್ತು NASC ಕಾರ್ಯಕರ್ತರ ಕಣ್ಣುಗಳು ಸಹ ಒದ್ದೆಯಾದವು.

ಎರಡು ದಿನಗಳ ಹಿಂದೆ ಶೂಲಗಿರಿಯಲ್ಲಿ ಕೊಳದ ಬಳಿ ಬಾತುಕೋಳಿಗಳನ್ನು ಮೇಯಿಸುವಾಗ NASC ಕಾರ್ಯಕರ್ತರು ಅರುಣನನ್ನು ರಕ್ಷಿಸಿದ್ದರು.

ಕಳೆದ 6 ವರ್ಷಗಳ ಹಿಂದೆ ಅರುಣ್ ಕುಮಾರ್ ತಂದೆ ಸರವಣನ್‌ 2,000 ಸಾಲವನ್ನು ಮರುಪಾವತಿಸಲಾಗದ್ದಕ್ಕೆ ಪ್ರತಿಯಾಗಿ ಮಗನನ್ನೇ ಮಾರಾಟ ಮಾಡಿದ್ದ. ಇನ್ನೊಬ್ಬ ಮಗನನ್ನು ಸಹ ಇದೇ ರೀತಿಯಲ್ಲಿ ಮಾರಲಾಗಿತ್ತು. ಕಳೆದ ಮೂರು ವರ್ಷದ ಹಿಂದೆ ಸರವಣನ್ ತೀರಿಕೊಂಡಿದ್ದು ತನ್ನ ಮಕ್ಕಳಿಬ್ಬರು ಯಾರಿಗೆ ಮಾರಲ್ಪಟ್ಟಿದ್ದಾರೆಂಬುದು ತಾಯಿ ವಲ್ಲಿಗೆ ತಿಳಿದಿರಲಿಲ್ಲ, ಎಂದು ಸ್ವಯಂ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣನ್ ತಿಳಿಸಿದ್ದಾರೆ.

ಅರುಣ್ ಕುಮಾರ್ ಪತ್ತೆ ಹಚ್ಚಿ ತಾಯಿಯನ್ನು ಸಂಪರ್ಕಿಸಿದಾಗ ಆಕೆ ತನ್ನ ಇನ್ನೊಬ್ಬ ಮಗ ಸೆಲ್ವ ಕೂಡ ವೆಲ್ಲೂರಿನ ತಿರುಪತ್ತೂರಿನ ವ್ಯಕ್ತಿಯೊಬ್ಬನಿಗೆ ಮಾರಾಟವಾಗಿದ್ದಾನೆ ಎಂದು ತಿಳಿಸಿದ್ದಾಳೆ. ತಕ್ಷಣ ಕೃಷ್ಣಗಿರಿ ಆದಾಯ ವಿಭಾಗೀಯ ಅಧಿಕಾರಿ (RDO)ಎಲ್ ಸರವಣನ್ , ತಿರುಪತ್ತೂರಿನ ಆದಾಯ ವಿಭಾಗೀಯ ಅಧಿಕಾರಿ ಪ್ರಿಯಾಂಕಾರನ್ನು ಸಂಪರ್ಕಿಸಿದ್ದಾರೆ. ತಂಡವೊಂದನ್ನು ರಚಿಸಿ ಕಾರ್ಯಾಚರಣೆ ನಡೆಸಿ ಸೆಲ್ವನನ್ನು ರಕ್ಷಿಸಲಾಗಿದೆ.

Comments are closed.