ರಾಷ್ಟ್ರೀಯ

ಅಪಘಾತಗಳ ಕಾರಣ ಪತ್ತೆಗೆ ರೈಲುಗಳಲ್ಲಿ ಬ್ಲ್ಯಾಕ್‌ ಬಾಕ್ಸ್‌ ಅಳವಡಿಕೆಗೆ ನಿರ್ಧಾರ

Pinterest LinkedIn Tumblr


ಹೊಸದಿಲ್ಲಿ: ಅಪಘಾತಗಳ ಕಾರಣ ಪತ್ತೆಗೆ ನೆರವಾಗುವ ಧ್ವನಿ ಪೆಟ್ಟಿಗೆ ಅಥವಾ ಬ್ಲ್ಯಾಕ್‌ ಬಾಕ್ಸ್‌ ವ್ಯವಸ್ಥೆಯನ್ನು ರೈಲುಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ರೈಲುಗಳಲ್ಲಿ ಲೋಕೊ ಕ್ಯಾಬ್‌ ವೈಸ್‌ ರೆಕಾರ್ಡಿಂಗ್‌ (ಎಲ್‌ಸಿವಿಆರ್‌) ವ್ಯವಸ್ಥೆ ಅಳವಡಿಸಲಾಗುವುದು ಎಂದು ರೈಲ್ವೆ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.

”ಇದರಿಂದ ಅಪಘಾತದ ನಿಖರ ಕಾರಣ ಪತ್ತೆಯಾಗುತ್ತದೆ. ರೈಲು ಸಿಬ್ಬಂದಿಯ ಕಾರ್ಯಕ್ಷಮತೆ ಮೇಲೂ ನಿಗಾ ಇಡಬಹುದಾಗಿದೆ. ಪದೇಪದೆ ದುರಂತಗಳು ಘಟಿಸುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ,” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಇದರ ಅಳವಡಿಕೆಗೆ ಸದ್ಯ ಯಾವುದೇ ಕಾಲಮಿತಿ ಇಲ್ಲ. ಆ ಸಾಧನ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಳಿ , ಬೇರಿಂಗ್‌ ಮತ್ತು ಗಾಲಿಗಳಲ್ಲಿ ಇರುವ ಸಮಸ್ಯೆಗಳನ್ನು ಮುಂಚಿತವಾಗಿಯೇ ಪತ್ತೆ ಹಚ್ಚಿ ಅವಘಡ ತಪ್ಪಿಸಲು ನೆರವಾಗುವ ಸ್ಮಾರ್ಟ್‌ ಬೋಗಿಗಳನ್ನು ಕಳೆದ ತಿಂಗಳಷ್ಟೇ ಪರಿಚಯಿಸಿರುವ ಇಲಾಖೆ, ಈಗ ಸುರಕ್ಷತೆಯ ಮತ್ತೊಂದು ಮೈಲಿ ಕ್ರಮಿಸಲು ಮುಂದಾಗಿದೆ.

Comments are closed.