ರಾಷ್ಟ್ರೀಯ

ಉತ್ತಮ ಹಿಂದು ಮತ್ತೊಬ್ಬರ ಆರಾಧನಾಲಯ ಕೆಡವಿ ರಾಮಮಂದಿರ ನಿರ್ಮಾಣಕ್ಕೆ ಇಚ್ಛಿಸುವುದಿಲ್ಲ: ಶಶಿ ತರೂರ್

Pinterest LinkedIn Tumblr


ಹೊಸದಿಲ್ಲಿ: ರಾಮಮಂದಿರ ಕುರಿತಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಬಿಜೆಪಿ ಅನಗತ್ಯ ವಿವಾದ ಸೃಷ್ಟಿಸುತ್ತಿದೆ. ನನ್ನ ಹೇಳಿಕೆ ಏನಿತ್ತು ಮತ್ತು ಅದರ ಆರ್ಥವೇನು ಎಂದು ಬಿಜೆಪಿ ಮೊದಲು ತಿಳಿದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಸಾಹಿತ್ಯ ಸಮಾರಂಭವೊಂದರಲ್ಲಿ ಮಾತನಾಡಿದ್ದ ಶಶಿ ತರೂರ್, 1992ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಉಲ್ಲೇಖಿಸಿ ಯಾವೊಬ್ಬ ಉತ್ತಮ ಹಿಂದು ಕೂಡ ಮತ್ತೊಬ್ಬರ ಆರಾಧನಾಲಯವನ್ನು ಕೆಡವಿ ಅಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇಚ್ಛಿಸುವುದಿಲ್ಲ ಎಂದಿದ್ದರು.

ತರೂರ್ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ರಾಮಮಂದಿರ ನಿರ್ಮಾಣ ಕಾಂಗ್ರೆಸ್‌ ಇಷ್ಟವಿಲ್ಲ, ಕಾಂಗ್ರೆಸ್‌ ನಾಯಕರು ಕೂಡ ಅದನ್ನೇ ಬಯಸುತ್ತಾರೆ ಎಂದು ಬಿಜೆಪಿ ಹೇಳಿತ್ತು.

ಹೇಳಿಕೆ ವಿವಾದ ಸೃಷ್ಟಿಸುತ್ತಲೇ ಸ್ಪಷ್ಟನೆ ನೀಡಿರುವ ತರೂರ್, ಬಿಜೆಪಿ ಅನಗತ್ಯ ವಿವಾದ ಸೃಷ್ಟಿಸಿದೆ. ರಾಮ ಮಂದಿರ ನಿರ್ಮಾಣ ಬೇಡ ಎಂದು ನಾನು ಹೇಳಿಲ್ಲ, ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದಿದ್ದಾರೆ.

Comments are closed.