ರಾಷ್ಟ್ರೀಯ

ನಾಯಿಗೆ ಬೈದಿದ್ದಕ್ಕೆ ಇರಿದು ಕೊಂದ ನೆರೆಮನೆಯವರು!

Pinterest LinkedIn Tumblr


ನವದೆಹಲಿ: ಒಂದೆರೆಡು ನಿಮಿಷದಲ್ಲಿ ಮನೆ ಸೇರಿ ಆಯಾಗಿ ಮಲಗಿ ವಿಶ್ರಾಂತಿ ಪಡೆಯಬೇಕಿದ್ದ ವ್ಯಕ್ತಿಯೊರ್ವ ರಸ್ತೆ ಮಧ್ಯೆ ನಿಂತು ಬೊಗಳುತ್ತಿದ್ದ ನಾಯಿಗೆ ಬೈದಿದ್ದಕ್ಕೆ ನಾಯಿಯ ಮಾಲೀಕರು ಆತನಿಗೆ ಚೂರಿ ಇರಿದು ಕೊಲೆ ಮಾಡಿದ್ದಾರೆ.
ನವದೆಹಲಿಯಲ್ಲಿ ಈ ಘಟನೆ ನಡೆಸಿದ್ದು ವಿಜೇಂದ್ರ ರಾಣಾ ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ. ವಿಜೇಂದ್ರ ಲಾರಿ ಚಾಲಕನಾಗಿದ್ದು ಮಧ್ಯರಾತ್ರಿ ಮನೆಗೆ ಬರುತ್ತಿದ್ದರು. ಈ ವೇಳೆ ಟಾಮಿ(ನಾಯಿ)ಯೊಂದಿಗೆ ಮೂವರು ಮಧ್ಯರಾತ್ರಿಯಲ್ಲಿ ತಿರುಗಾಡಲು ತೆರಳಿದ್ದಾರೆ.
ವಿಜೇಂದ್ರ ರಾಣಾ ನಡೆದುಕೊಂಡು ಬರುತ್ತಿದ್ದುದ್ದನ್ನು ಕಂಡ ಟಾಮಿ ಬೊಗಳಲು ಶುರು ಮಾಡಿದೆ. ಈ ವೇಳೆ ರಾಣಾ ನಾಯಿಯನ್ನು ಬೈದು ಬೆದರಿಸಿ ಓಡಿಸಲು ಮುಂದಾಗಿದ್ದಾನೆ. ಈ ವೇಳೆ ಅಲ್ಲೇ ಪಕ್ಕದಲ್ಲಿದ್ದ ಮೂವರು ಬಂದು ನಾಯಿಗೆ ಕ್ಷಮೆ ಕೇಳುವಂತೆ ಬೆದರಿಕೆ ಹಾಕಿದ್ದಾರೆ. ಇದನ್ನು ರಾಣಾ ವಿರೋಧಿಸಿದ್ದರಿಂದ ಮೂವರು ಸೇರಿ ರಾಣಾಗೆ ಚೂರಿಯಿಂದ ಆರು ಬಾರಿ ಇರಿದಿದ್ದಾರೆ.
ಅಣ್ಣನ ಕೂಗಾಟವನ್ನು ಕೇಳಿ ಹೊರ ಬಂದ ಸಹೋದರ ಆತನ ರಕ್ಷಣೆಗೆ ಮುಂದಾಗಿದ್ದಾನೆ. ಈ ವೇಳೆ ತೀವ್ರವಾಗಿ ಗಾಯಗೊಂಡು ರಕ್ತ ಸ್ರಾವವಾಗಿದ್ದರಿಂದ ರಾಣಾನನ್ನು ಕೂಡಲೇ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Comments are closed.