ಕೊಚ್ಚಿ: ಕೇರಳದ ಬಾಲಕನೊಬ್ಬ ನಾಪತ್ತೆಯಾಗಿದ್ದು, ಆತನಿಗಾಗಿ ಕರ್ನಾಟಕದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಮುಬಾಶಿರ್ ಎಂಬಾತ ಕಳೆದ ಶನಿವಾರ ಕೇರಳದ ಕಣ್ಣೂರಿನಿಂದ ಕಾಣೆಯಾಗಿದ್ದ. ಮುಬಾಶಿರ್ ಕರ್ನಾಟಕಕ್ಕೆ ಹೋಗಿರಬಹುದ ಎಂದು ಆತನ ಸಂಬಂಧಿಕರು ಮಾಹಿತಿ ನೀಡಿದ್ದಾರೆ.
ಶ್ರೀಕಂಡಪುರಂ ಪೊಲೀಸ್ ಠಾಣೆಗೆಯಲ್ಲಿ ಮುಬಾಶಿರ್ ಪೋಷಕರು ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಬಾಶಿರ್‌ಗಾಗಿ ಶೋಧ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿಯೂ ಶೋಧ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ.
ಈತನ ಬಗ್ಗೆ ಮಾಹಿತಿ ಸಿಕ್ಕಿದರೆ 90745 20622 ಮೊಬೈಲ್ ಸಂಖ್ಯೆಗೆ ದೂರವಾಣಿ ಕರೆ ಮಾಡಿ ತಿಳಿಸಬೇಕೆಂದು ಕೋರಲಾಗಿದೆ.
Comments are closed.