ರಾಷ್ಟ್ರೀಯ

ಪ್ರೀತಿಸಿದ ಮುಸ್ಲಿಂ ಯುವತಿಯ ಕುಟುಂಬದವರಿಂದ ಹಿಂದು ಪ್ರಿಯತಮನ ಗುಂಡಿಕ್ಕಿ ಹತ್ಯೆ!

Pinterest LinkedIn Tumblr


ನವದೆಹಲಿ: ಹಿಂದೂ ಯುವಕ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದಕ್ಕೆ ಆತನ ಪಾಲಿಗೆ ಸಿಕ್ಕಿದ್ದು ಸಾವು. ಆಕೆಯ ಕುಟುಂಬದವರೇ ಆತನ ಪಾಲಿಗೆ ಯಮ ಸ್ವರೂಪಿಯಾಗಿ ಗುಂಡಿಕ್ಕಿ ಕೊಂದಿದ್ದಾರೆ.

ಅಂಕಿತ್ (31) ಸಾವನ್ನಪ್ಪಿದ ಯುವಕ. ವೃತ್ತಿಯಲ್ಲಿ ಶಿಕ್ಷಕನಾಗಿದ್ದಈತ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇವರ ಪ್ರೀತಿಗೆ ಹುಡುಗಿ ಮನೆಯವರ ವಿರೋಧವಿತ್ತು. ಇಬ್ಬರದೂ ಬೇರೆ ಧರ್ಮ ಎಂಬ ಕಾರಣಕ್ಕೆ ಹುಡುಗಿಯ ಅಣ್ಣ ಇವರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದ.

ಅಂಕಿತ್​ ದೆಹಲಿಯ ಮಹೇಂದ್ರ ಪಾರ್ಕ್​ ಬಳಿಯಿರುವ ಟ್ಯೂಶನ್​ ಸೆಂಟರ್​ನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದ ಎನ್ನಲಾಗಿದೆ. ಮೂಲಗಳ ಪ್ರಕಾರ ಮೃತಪಟ್ಟ ಅಂಕಿತ್​ ಮತ್ತು ಮುಸ್ಲಿಂ ಹುಡುಗಿ ಮದುವೆಯಾಗಲು ಬಯಸಿದ್ದರು. ಇಬ್ಬರದೂ ಬೇರೆ ಧರ್ಮ ಎಂಬ ಕಾರಣದಿಂದ ಆಕೆಯ ಅಣ್ಣ ಇವರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದ ಎಂದು ತಿಳಿದುಬಂದಿದೆ.

ಸೋಮವಾರ ಬೆಳಿಗ್ಗೆ 8.30 ರ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಹುಡುಗಿಯ ಅಣ್ಣ ಟ್ಯೂಶನ್​ ಸೆಂಟರ್​ನಲ್ಲಿ ಅಂಕಿತ್​ಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಇಬ್ಬರು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಂಕಿತ್​​ ಸಾವಿಗೂ ಮುನ್ನ ಹುಡುಗಿಯ ಮನೆಯವರು ಆತನಿಗೆ ಸುಮಾರು ಸಲ ಬೆದರಿಕೆ ಒಡ್ಡಿದ್ದರು. ಅಲ್ಲದೇ ತಮ್ಮ ಮನೆಯ ಹುಡಗಿಯ ಸಹವಾಸಕ್ಕೆ ಬರದಂತೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಕಳೆದ ವರ್ಷ ದೆಹಲಿಯ 24 ವರ್ಷದ ಫೋಟೋಗ್ರಾಫರ್​ ಅಂಕಿತ್​ ಸಕ್ಸೆನಾ ಆತನ ಹುಡುಗಿಯ ಕುಟುಂಬದವರಿಂದಲೇ ಹತ್ಯೆಯಾಗಿದ್ದ.

Comments are closed.