ಕರ್ನಾಟಕ

ಜಾರಕಿಹೊಳಿ ಬೆಂಬಲಿಗರಿಂದ ರಾಣಿ ಚೆನ್ನಮ್ಮ ವಿವಿಗೆ ನುಗ್ಗಿ ಗಲಾಟೆ?

Pinterest LinkedIn Tumblr


ಬೆಳಗಾವಿ: ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಆಕ್ರೋಶಗೊಂಡ ಶಾಸಕ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರೆನ್ನಲಾದ ಕಾರ್ಯಕರ್ತರು ರಾಣಿ ಚೆನ್ನಮ್ಮ ವಿವಿಗೆ ನುಗ್ಗಿ ಟೇಬಲ್, ಕಿಟಕಿ ಗಾಜನ್ನು ಪುಡಿ, ಪುಡಿ ಮಾಡಿರುವ ಘಟನೆ ಸೋಮವಾರ ನಡೆದಿದೆ.

ವಿವಿಯಲ್ಲಿ ರಾಷ್ಟ್ರೀಯ ಸೇವಾ ದಳ ಆಯೋಜಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಆಹ್ವಾನಿಸಿಲ್ಲ ಎಂದು ಅವರ ಬೆಂಬಲಿಗರು ವಿವಿಗೆ ನುಗ್ಗಿ ದಾಂಧಲೆ ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಸತೀಶ್ ಜಾರಕಿಹೊಳಿ ಅವರ ಕಟ್ಟಾ ಬೆಂಬಲಿಗ, ಕಾಕತಿ ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದು ಸುಣಗಾರ ಹಾಗೂ ಬೆಂಬಲಿಗರು ರಕ್ತದಾನ ಶಿಬಿರ ನಡೆಯುತ್ತಿದ್ದ ಸ್ಥಳಕ್ಕೆ ಬಂದು ರಂಪಾಟ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಜಾರಕಿಹೊಳಿ ಸಹೋದರರು ಮತ್ತು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ರಾಜಕೀಯ ಜಂಗೀಕುಸ್ತಿ ನಡೆಯುತ್ತಿದೆ.

Comments are closed.