ಕರಾವಳಿ

ಬುಧವಾರದಿಂದ ಶಿರಾಡಿ ಘಾಟ್ ರಸ್ತೆಯಲ್ಲಿ ಎಲ್ಲಾ ಬಸ್ ಸಂಚಾರಕ್ಕೆ ಅವಕಾಶ : ಜಿಲಾಧಿಕಾರಿ

Pinterest LinkedIn Tumblr

ಮಂಗಳೂರು,ಅಕ್ಟೋಬರ್. 01: ಶಿರಾಡಿ ಘಾಟ್ ರಸ್ತೆಯಲ್ಲಿ ಘನ ವಾಹನ ಸಂಚಾರ ನಿರ್ಭಂಧ ಮಾಡಲಾಗಿದ್ದು, ಬುಧವಾರದಿಂದ ಶಿರಾಡಿ ಘಾಟ್ ರಸ್ತೆ ಮೂಲಕ ಎಲ್ಲಾ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ.

ಮಂಗಳೂರಿನ ತಮ್ಮ ಕಚೇರಿಯಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾಡಿ ಘಾಟ್ ನಲ್ಲಿ ಕುಸಿತಗೊಂಡ 12 ಕಡೆಯ ಪೈಕಿ 8 ಕಡೆ ಅಪಾಯವಿಲ್ಲ. ಅಪಾಯ ಸಾಧ್ಯತೆಯ 4 ಕಡೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹಾಸನ ಜಿಲ್ಲಾಧಿಕಾರಿ ಮತ್ತು ದ.ಕ. ಎಸ್ಪಿ ಜೊತೆ ಚರ್ಚಿಸಲಾಗಿದೆ. ಒಂದೆರಡು ವಾರದ ಬಳಿಕ ಪರಿಸ್ಥಿತಿ ಗಮನಿಸಿ ಘನ ವಾಹನಗಳ ಸಂಚಾರದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅವರು ಈ ವೇಳೆ ಮಾಹಿತಿ ನೀಡಿದರು.

Comments are closed.