ರಾಷ್ಟ್ರೀಯ

ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಗುಂಪಿನ ದಾಳಿ ಕಾನೂನುಬಾಹಿರ: ಮೋಹನ್​ ಭಾಗವತ್​​

Pinterest LinkedIn Tumblr


ನವದೆಹಲಿ: ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಗುಂಪಿನ ದಾಳಿ ಕಾನೂನುಬಾಹಿರ. ದನದ ಮೇಲಿನ ಪ್ರೀತಿಯನ್ನು ಮನೆಯಲ್ಲಿ ಇರಿಸಿಕೊಳ್ಳಬೇಕೆ ಹೊರತು, ದೊಂಬಿ ಹತ್ಯೆಗಳನ್ನು ನಡೆಸುವುದು ಖಂಡನೀಯ ಎಂದು ಗೋರಕ್ಷಕರಿಗೆ ಆರ್​ಎಸ್​ಎಸ್​​ ಮುಖ್ಯಸ್ಥ ಮೋಹನ್​ ಭಾಗವತ್​​ ಎಚ್ಚರಿಕೆ ನೀಡಿದ್ಧಾರೆ.

ದೆಹಲಿಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ‘ಭವ್ಯ ಭಾರತ ಮತ್ತು ಆರ್​ಎಸ್​ಎಸ್ ದೃಷ್ಟಿಕೋನ ಎಂಬ ಉಸನ್ಯಾಸ ಕಾರ್ಯಕ್ರಮದಲ್ಲಿ ಮೋಹನ್​ ಭಾಗವತ್​​ ಅವರು ಹಲವು ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಇದೆವೇಳೆ ದೇಶದ ಪ್ರತಿಯೊಬ್ಬ ಪ್ರಜೆಯೂ ಮೂಲತಃ ಹಿಂದುವೇ ಎಂದು ಹೇಳಿದ್ದಾರೆ.

ಪ್ರತಿಬಾರಿಯೂ ಮುಸ್ಮಿಮರು ದೇಶದ್ರೋಹಿಗಳು, ಅವರಿಗೆ ನಮ್ಮ ಹಿಂದುರಾಷ್ಟ್ರದಲ್ಲಿ ಸ್ಥಾನವಿಲ್ಲ ಎನ್ನುತ್ತಿದ್ದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರು, ಇಂದು ದೇಶದಲ್ಲಿ ಜನಿಸಿದ ಪ್ರತಿಯೊಬ್ಬ ಭಾರತೀಯ ಕೂಡ ಮೂಲತಃ ಹಿಂದುವೇ ಎಂಬ ಹೇಳಿಕೆ ನೀಡಿ ಆಶ್ಚರ್ಯ ಮೂಡಿಸಿದ್ದಾರೆ.

ಸಂಘಪರಿವಾರಕ್ಕೆ​ ಜಾತಿ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ನಾವು ಜಾತಿಯ ಸಂಕೋಲೆಗಳನ್ನು ಕಿತ್ತೊಗೆಯ್ಯಲು ಹೋರಾಟ ಮಾಡಬೇಕಿದೆ. ಆರ್​ಎಸ್​ಎಸ್ ಕಾರ್ಯಕರ್ತರು ಎಲ್ಲಾ ಜಾತಿ ಸಮುದಾಯದವರನ್ನು ಪ್ರತಿನಿಧಿಸುತ್ತಿದ್ಧಾರೆ. ಸಂಘಪರಿವಾರ ಕ್ರೌಯ ಜಾತೀಯತೆಯ ವಿರುದ್ಧ ಹೋರಾಟ ನಡೆಸಲು ಮುಂದಾಗಿದೆ ಎಂದರು.

ಇಂಗ್ಲೀಷ್​ ಸೇರಿದಂತೆ ಯಾವುದೇ ಭಾಷೆಗೆ ನಮ್ಮ ವಿರೋದವಿಲ್ಲ. ಭಾರತಕ್ಕೆ ಎಲ್ಲಾ ಭಾಷೆಗಳ ಅವಶ್ಯಕತೆಯಿದೆ. ಉತ್ತಮವಾಗಿ ಆಂಗ್ಲಭಾಷೆಯನ್ನು ಮಾತಾಡಬಲ್ಲ ವಾಘ್ಮಿಗಳು ಬೇಕಿದ್ದಾರೆ. ಹೀಗಾಗಿ ನಾವು ಒಂದು ಭಾಷೆ ಹೇರಿಕೆ ಮಾಡುವ ಮೂಲಕ ಉಳಿದ ಭಾಷೆಗಳನ್ನು ತುಳುವ ಪ್ರಯತ್ನ ಮಾಡಲಾಗುವುದಿಲ್ಲ ಎಂದು ಭಾಷಾಭಿಮಾನವನ್ನು ಮೆರೆದರು.

ಇನ್ನು ದೇಶದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಪುರುಷರು ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಳ್ಳಬೇಕು. ಹೆಣ್ಣು ಇಂದು ಗಂಡಿಗೆ ಸಮಾನವಾಗಿ ಬೆಳೆಯುತ್ತಿದ್ಧಾಳೆ. ಹೀಗಾಗಿ ಮಹಿಳೆಯರನ್ನು ಗೌರವಿಸುವುದು ನಮ್ಮ ಮೊದಲ ಆದ್ಯತೆ ಎಂದರು. ಇದೇ ಸಂದರ್ಭದಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂದು ನೀಡಿದ ಹೈಕೋರ್ಟ್​ ತೀರ್ಪನ್ನು ಸ್ವಾಗತಿಸಿದರು.

Comments are closed.