ರಾಷ್ಟ್ರೀಯ

ವಾಜಪೇಯಿ ಶ್ರದ್ದಾಂಜಲಿ ಸಭೆಯಲ್ಲಿ ಹಾಸ್ಯ ಮಾಡುತ್ತ ಕುಳಿತ ಬಿಜೆಪಿ ಸಚಿವರು​

Pinterest LinkedIn Tumblr


ಛತ್ತೀಸ್​ಗಢ: ಅಜಾತಶತ್ರು, ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಅಗಲಿಕೆಯ ನೋವು ಇನ್ನೂ ಮಾಸಿಲ್ಲ. ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಕಳೆದುಕೊಂಡ ನೋವು ಎಲ್ಲರ ಮನದಲ್ಲಿದೆ. ಆದರೆ ಛತ್ತೀಸ್​ಗಢದ ಬಿಜೆಪಿ ಸಚಿವರಿಬ್ಬರು ವಾಜಪೇಯಿಯವರ ಗೌರವಾರ್ಥವಾಗಿ ಅಯೋಜಿಸಲಾಗಿದ್ದ ಶ್ರದ್ದಾಂಜಲಿ ಸಭೆಯಲ್ಲಿ ವೇದಿಕೆ ಮೇಲೆ ಹಾಸ್ಯ ಮಾಡುತ್ತಾ ಕುಳಿತಿದ್ದರು. ಈಗ ಆ ವಿಡಿಯೋ ವೈರಲ್​ ಆಗಿದ್ದು, ಎಲ್ಲರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ರಾಜ್ಯ ಕೃಷಿ ಸಚಿವ ಬೃಜ್​​ ಮೋಹನ್ ಅಗರ್ವಾಲ್​ ಹಾಗೂ ಆರೋಗ್ಯ ಸಚಿವ ಅಜಯ್​ ಚಂದ್ರಾಕರ್​ ಶ್ರದ್ಧಾಂಜಲಿ ಸಭೆಯಲ್ಲಿ ಗಂಭೀರವಾಗಿರದೆ ಪರಸ್ಪರ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ವೇದಿಕೆ ಮೇಲೆ ಕುಳಿತ್ತಿದ್ದರು. ಅಷ್ಟೇ ಅಲ್ಲದೇ ಸಚಿವ ಚಂದ್ರಾಕರ್ ಜೋರಾಗಿ ನಗುತ್ತಾ ತಮ್ಮ ಮುಂದಿರುವ ಟೇಬಲ್​ನ್ನು ಬಡಿಯುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ. ಆಗ ರಾಜ್ಯ ಬಿಜೆಪಿ ಅಧ್ಯಕ್ಷ ಧರಂಲಾಲ್​ ಕೌಶಿಕ್​ ಚಂದ್ರಾಕರ್​ ಅವರ ಕೈ ಹಿಡಿದು ನಗಬಾರದೆಂದು ಸನ್ನೆ ಮಾಡುತ್ತಾರೆ.

ವಿಪಕ್ಷ ಕಾಂಗ್ರೆಸ್​ ಇಬ್ಬರು ಸಚಿವರನ್ನೂ ತರಾಟೆಗೆ ತೆಗೆದುಕೊಂಡಿದೆ. ‘ಬಿಜೆಪಿ ನಾಯಕರು ವಾಜಪೇಯಿ ಅವರಿಗೆ ಗೌರವ ತೋರಿಸುವುದು ಸಾಧ್ಯವಿಲ್ಲವಾದರೆ ಕನಿಷ್ಠ ಅಗೌರವ ತೋರದಿರಲಿ. ವಾಜಪೇಯಿ ಕಾಲವಾದ ನಂತರ ಈ ಬಿಜೆಪಿ ಸಚಿವರ ವರ್ತನೆಯು ಅಗಲಿದ ಹಿರಿಯ ನಾಯಕನ ಮೇಲೆ ಗೌರವ ಎಷ್ಟಿದೆ ಎಂದು ತೋರಿಸುತ್ತಿದೆ’ ಎಂದು ರಾಜ್ಯ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಶೈಲೇಶ್​ ನಿತಿನ್​ ತ್ರಿವೇದಿ ಕಿಡಿಕಾರಿದ್ದಾರೆ.

ಬಿಜೆಪಿಯ ಉನ್ನತ ನಾಯಕತ್ವ ಅಟಲ್​ ಜೀ ಅವರು ಬದುಕಿದ್ದಾಗ ಬಿಜೆಪಿ ಕಡೆಗಣಿಸಿತ್ತು. ಅಟಲ್​ ಅವರ ನಿಧನದ ನಂತರ ಬಿಜೆಪಿ ಮತ್ತು ರಮಣ್ ಸಿಂಗ್​ ವಾಜಪೇಯಿ ಅವರಿಗೆ ತೋರಿಸುತ್ತಿರುವ ಪ್ರೀತಿ ಮತ್ತು ಗೌರವ ಕೇವಲ ನಾಟಕ’ ಎಂದು ಹೇಳಿದ್ದಾರೆ.

ಅಟಲ್​ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ದೇಶದ ಪ್ರಮುಖ ನದಿಗಳಲ್ಲಿ ವಿಸರ್ಜಿಸಿದ ಬಳಿಕ ಬುಧವಾರ ಈ ಶ್ರದ್ದಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಮುಖ್ಯಮಂತ್ರಿ ರಮಣ್​ ಸಿಂಗ್ ಸಹ​ ಇದ್ದರು.

Comments are closed.