ರಾಷ್ಟ್ರೀಯ

ಗಂಡನ ಗುಪ್ತಾಂಗ ಕಚ್ಚಿ ತುಂಡು ಮಾಡಿದ ಪತ್ನಿ

Pinterest LinkedIn Tumblr


ವೆಲ್ಲೂರು: ಗಂಡನ ಗುಪ್ತಾಂಗವನ್ನು ಕಚ್ಚಿ ತುಂಡು ಮಾಡಿದ ಹೀನ ಕೃತ್ಯ ವೆಲ್ಲೂರಿನಲ್ಲಿ ನಡೆದಿದೆ.

ಜಯಂತಿ (45) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದು, ತನ್ನ ಪ್ರಿಯಕರನ ಜತೆಗಿದ್ದ ಖಾಸಗಿ ಕ್ಷಣವನ್ನು ಪತಿ ಸೆಂತಮಾರೈ (55) ನೋಡಿದ್ದಾನೆ. ಇದನ್ನು ಗ್ರಾಮಸ್ಥರಿಗೆ ಹೇಳುತ್ತಾನೆ ಎಂದು ಜಯಂತಿ ಈ ಕೃತ್ಯ ಎಸಗಿದ್ದಾಳೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ.

ಸೋಮವಾರ ಬೆಳಗಿನ ಜಾವ ಸೆಂತಮಾರೈನನ್ನು ಸ್ಥಳೀಯರು ವೆಲ್ಲೂರು ಸರಕಾರಿ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಜೀವ್‌ ಗಾಂಧಿ ಸರಕಾರಿ ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜಿಗೆ ರವಾನಿಸಲಾಗಿದೆ. ಪ್ರಸ್ತುತ ಸೆಂತಮಾರೈ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದಾಗಿ ತಿಳಿದು ಬಂದಿದೆ.

ಜಯಂತಿ ಹಾಗೂ ಸೆಂತಮಾರೈ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾರೆ. ಸುಮಾರು ಮಧ್ಯರಾತ್ರಿ 1.30 ರ ವೇಳೆಗೆ ಕಾರ್ಯಕ್ರಮದ ಜನಜಂಗುಳಿಯಲ್ಲಿ ಜಯಂತಿ ಪತಿಯಿಂದ ಬೇರೆಯಾಗಿದ್ದಾಳೆ. ಒಂದು ಗಂಟೆಗೂ ಹೆಚ್ಚು ಹೊತ್ತಾದರೂ, ಜಯಂತಿ ಕಾಣದೇ ಇದ್ದುದರಿಂದ ಪತ್ನಿಯನ್ನು ಹುಡುಕಿಕೊಂಡು ಸೆಂತಮಾರೈ ಹೋಗಿದ್ದಾನೆ. ಈ ವೇಳೆ ಮತ್ತೊಬ್ಬ ಗ್ರಾಮಸ್ಥ ದಚ್ಚನಮೂರ್ತಿ ಎಂಬಾತನ ಜತೆ ಜಯಂತಿ ಇದ್ದುದನ್ನು ಸೆಂತಮಾರೈ ನೋಡಿದ್ದಾನೆ.

ಈ ವೇಳೆ ಪ್ರಣಯದಾಟವನ್ನು ಗ್ರಾಮದಲ್ಲಿ ಬಹಿರಂಗಪಡಿಸುವುದಾಗಿ ಸೆಂತಮಾರೈ ಧಮಕಿ ಹಾಕಿದ್ದಾನೆ. ಈ ವೇಳೆ ಉಂಟಾದ ಗಲಾಟೆಯಲ್ಲಿ ಸೆಂತಮಾರೈ ನ ಪಂಚೆ ಕೆಳಕ್ಕೆ ಬಿದ್ದಿದೆ. ಗ್ರಾಮಸ್ಥರಿಗೆ ವಿಚಾರ ಗೊತ್ತಾದರೆ, ಇಬ್ಬರಿಗೂ ಥಳಿಸುತ್ತಾರೆ ಎಂಬ ಭಯದಲ್ಲಿ, ಜಯಂತಿ ಸೆಂತಮಾರೈ ನ ಮರ್ಮಾಂಗವನ್ನು ಕಚ್ಚಿ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ದಚ್ಚನಮೂರ್ತಿ ಮೊಬೈಲನ್ನು ಟ್ರೇಸ್‌ ಮಾಡುವ ಮೂಲಕ ಜಯಂತಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ತಪ್ಪೊಪ್ಪಿಕೊಂಡಿರುವ ಜಯಂತಿಯನ್ನು ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ವೆಲ್ಲೂರು ಮಹಿಳಾ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.

Comments are closed.