ರಾಷ್ಟ್ರೀಯ

ಅಸ್ಸಾಂ ನಲ್ಲಿ ನಾಗರಿಕರ ರಾಷ್ಟ್ರೀಯ ನೋಂದಣಿಯಲ್ಲಿ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಮನೆತನದವರ ಹೆಸರೇ ಕಣ್ಮರೆ: ಮಮತಾ

Pinterest LinkedIn Tumblr


ನವದೆಹಲಿ: ಅಸ್ಸಾಂ ನಲ್ಲಿ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ ಆರ್ ಸಿ)ಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಶ್ವದ ಸುಧಾರಣೆಗಾಗಿ ಭಾರತ ಬದಲಾವಣೆ ಬಯಸುತ್ತಿದೆ, ಆ ಬದಲಾವಣೆ 2019 ರಲ್ಲಿ ಬರಬೇಕು ಎಂದು ಹೇಳಿದ್ದಾರೆ.
ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ನಲ್ಲಿ ಲವ್ ಫಾರ್ ನೇಬರ್ಸ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮಮತಾ ಬ್ಯಾನರ್ಜಿ ಅಸ್ಸಾಂ ನಲ್ಲಿ ಏನು ನಡೆಯುತ್ತಿದೆ? ಎನ್ ಆರ್ ಸಿ ಸಮಸ್ಯೆ ಕೇವಲ ಬಂಗಾಳಿಗಳಿಗೆ ಮಾತ್ರವಲ್ಲ, ಅಲ್ಪಸಂಖ್ಯಾತರು, ಹಿಂದೂಗಳು, ಬಂಗಾಳಿಗಳು, ಬಿಹಾರಿಗಳಿಗೂ ಸಮಸ್ಯೆಯಾಗಿದೆ. ನೆನ್ನೆ ಅಧಿಕಾರದಲ್ಲಿದ್ದ ಪಕ್ಷಕ್ಕೆ ಮತ ಚಲಾವಣೆ ಮಾಡಿದ್ದವರನ್ನು ಏಕಾಏಕಿ ಅವರದ್ದೇ ದೇಶದಲ್ಲಿ ನಿರಾಶ್ರಿತರನ್ನಾಗಿ ಮಾಡಲಾಗುತ್ತಿದೆ. ನನ್ನ ಮಾತೃಭೂಮಿಯನ್ನು ವಿಶ್ವಾಸವೇ ಇಲ್ಲದ ದೇಶವನ್ನಾಗಿ ನೋಡುವುದಕ್ಕೆ ಸಾಧ್ಯವಿಲ್ಲ, ನನ್ನ ದೇಶ ಒಡೆಯುವುದನ್ನು ನೋಡಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಎನ್ ಆರ್ ಸಿ ಅಸ್ಸಾಂ ಪಟ್ಟಿಯಲ್ಲಿ ನಮ್ಮ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಮನೆತನದವರ ಹೆಸರೇ ಕಣ್ಮರೆಯಾಗಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ, ಎನ್ ಆರ್ ಸಿ ಬಗ್ಗೆ ಇದಕ್ಕಿಂತ ಬೇರೇನು ಹೇಳುವುದಕ್ಕೆ ಸಾಧ್ಯ? ಈ ರೀತಿ ಇನ್ನೂ ಹಲವು ಜನರ ಹೆಸರು ನಾಪತ್ತೆಯಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Comments are closed.