ರಾಷ್ಟ್ರೀಯ

ಸೆಕ್ಸ್‌ಗಾಗಿ ಅಪ್ರಾಪ್ತೆಯರಿಗೆ ಹಾರ್ಮೋನ್‌ ಇಂಜೆಕ್ಷನ್‌ ಬಳಕೆ

Pinterest LinkedIn Tumblr


ಹೈದರಾಬಾದ್‌: ಶಾಲಾ ಸಮವಸ್ತ್ರ ಧರಿಸಿದ್ದ ಹಲವಾರು ಅಪ್ರಾಪ್ತೆಯರು ರೂಮ್‌ವೊಂದರಲ್ಲಿ ಪತ್ತೆಯಾಗಿದ್ದು, ಸೆಕ್ಸ್‌ ಜಾಲದಲ್ಲಿ ಸಿಲುಕಿಕೊಂಡಿದ್ದ ಬಾಲಕಿಯರಿಗೆ ಹಾರ್ಮೋನ್ಸ್‌ ಇಂಜೆಕ್ಷನ್‌ ನೀಡಿ ಅವರನ್ನು ಮಾರಾಟ ಮಾಡಲಾಗುತ್ತಿತ್ತು ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಗಳ ಮೇಲೆ ದಾಳಿ ನಡೆಸಿದ ತಂಡವು ಸುಮಾರು 12 ಜನ ಮಕ್ಕಳನ್ನು ರಕ್ಷಿಸಿದ್ದು, ಅವರಲ್ಲಿ ನಾಲ್ವರು 7 ವರ್ಷಕ್ಕೂ ಕೆಳಗಿನವರು. ಪ್ರಕರಣ ಸಂಬಂಧ ಆರು ಜನ ಮಹಿಳೆಯರು ಸೇರಿ 8 ಜನ ಮಾನವ ಕಳ್ಳ ಸಾಗಣೆದಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾನವ ಕಳ್ಳಸಾಗಣೆದಾರರು ಎಲ್ಲ ಬಡ ಕುಟುಂಬಗಳಿಂದ ಮಕ್ಕಳನ್ನು ಏಜೆಂಟ್‌ಗಳ ಮೂಲಕ ಪ್ರತಿ ಮಗುವಿಗೆ ಒಂದು ಲಕ್ಷದಿಂದ ಸುಮಾರು 2 ಲಕ್ಷ ನೀಡಿ ಕೊಂಡುಕೊಳ್ಳುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಹೇಶ್‌ ಎಂ. ಭಾಗವತ್‌ ತಿಳಿಸಿದ್ದಾರೆ.

ಇದಲ್ಲದೆ ರೈಲ್ವೆ ನಿಲ್ದಾಣಗಳಲ್ಲಿ, ಮನೆ ಬಿಟ್ಟು ಬಂದಿರುವವರನ್ನು ಹುಡುಕಿ ಕರೆತರಲಾಗುತ್ತದೆ. ಸ್ವಲ್ಪ ಹಿರಿಯ ಹುಡುಗಿಯಾಗಿದ್ದರೆ ಅವರ ಬೆಲೆ ಇನ್ನಷ್ಟು ಹೆಚ್ಚುತ್ತದೆ ಎಂದು ಕಳ್ಳಸಾಗಣೆದಾರರು ಪೊಲೀಸರಿಗೆ ತಿಳಿಸಿದ್ದಾರೆ.

ಇಂತಹ ಹುಡುಗಿಯರಿಗೆ ಹಾರ್ಮೋನ್​ ಇಂಜೆಕ್ಷನ್‌ ಅನ್ನು ನೀಡಿ ಅವರನ್ನು ಸೆಕ್ಸ್‌ಗೆ ಅಣಿಗೊಳಿಸಲಾಗುತ್ತದೆ. ಇನ್ನು ಚುಚ್ಚುಮದ್ದನ್ನು ನೀಡಲು ಸಹ ವೈದ್ಯರಿಗೆ 20 ಸಾವಿರ ರೂಪಾಯಿಯಿಂದ 25 ಸಾವಿರಗಳವರೆಗೆ ನೀಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

Comments are closed.