ರಾಷ್ಟ್ರೀಯ

ಪಟಿಯಾಲ ಏವಿಯೇಷನ್‌ ಕ್ಲಬ್‌ನಲ್ಲಿ ತರಬೇತಿ ಮುಗಿಸಿರುವ ಯುವತಿಯರ ಪ್ರಪಂಚ ಪರ್ಯಟನೆ

Pinterest LinkedIn Tumblr


ಪಟಿಯಾಲ: ಪಟಿಯಾಲ ಏವಿಯೇಷನ್‌ ಕ್ಲಬ್‌ನಲ್ಲಿ ತರಬೇತಿ ಮುಗಿಸಿರುವ ಇಬ್ಬರು ಯುವತಿಯರು ಪ್ರಪಂಚ ಸುತ್ತಲು ತಯಾರಾಗಿದ್ದಾರೆ.

90 ದಿನಗಳಲ್ಲಿ ಕೀಥೈರ್ ಗಿಲ್‌ರಾಯ್ ಮಿಸ್ಕ್ಯುಟಾ (23) ಹಾಗೂ ಆರೋಹಿ ಪಂಡಿತ್‌ (22) ಸುಮಾರು 40 ಸಾವಿರ ಕಿ.ಮೀ ಹಾರಾಟ ನಡೆಸಲಿದ್ದಾರೆ. 23 ದೇಶಗಳನ್ನು ಸುತ್ತಲಿರುವ ಇಬ್ಬರು ಯುವತಿಯರು, ಮಹಿಳಾ ಸಬಲೀಕರಣ, ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ಕೈಗೊಂಡಿದ್ದಾರೆ.

ಕೀಥೈರ್ ಗಿಲ್‌ರಾಯ್ ಮಿಸ್ಕ್ಯುಟಾ ಹಾಗೂ ಆರೋಹಿ ಪಂಡಿತ್‌

ಸೌತ್‌ಈಸ್ಟ್‌ ಏಷ್ಯಾ, ಜಪಾನ್‌, ರಷ್ಯಾ, ಕೆನಡ, ಯುಎಸ್‌ಎ, ಗ್ರೀನ್‌ಲ್ಯಾಂಡ್‌, ಐರ್ಲಾಂಡ್‌, ಯುರೋಪ್‌ ಹಾಗೂ ಸೇರಿದಂತೆ ಇನ್ನಿತರ ದೇಶಗಳಿಗೆ ಸಾಗಲಿದ್ದಾರೆ.

ಏವಿಯೇಷನ್‌ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಪ್ರಣೀತ್ ಕೌರ್‌ ಯುವತಿಯರ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.

ಕಾರ್ಯಾಚರಣೆಗೆ ಶುಭಕೋರಿದ ಗಣ್ಯರು

ಇಂತಹ ಕಾರ್ಯದಿಂದ ಭಾರತದ ಮಹಿಳೆಯ ಹಿರಿಮೆ ವಿಶ್ವದಾದ್ಯಂತ ಹೆಚ್ಚಲಿದೆ ಎಂದು ಮಾಜಿ ಸಚಿವೆ ಪ್ರಣೀತ್‌ ತಿಳಿಸಿದ್ದಾರೆ

ಕಳೆದ ನಾಲ್ಕು ವರ್ಷದಿಂದ ನಾವಿಬ್ಬರು ಜತೆಯಲ್ಲಿ ಹಾರಾಟ ನಡೆಸುತ್ತಿದ್ದೇವೆ. ಪ್ರತಿ ದಿನಕ್ಕೆ ನಾಲ್ಕೈದು ಗಂಟೆಗಳ ಕಾಲ ಮಾತ್ರ ಹಾರಾಟ ನಡೆಸಲಾಗುವುದು. ಆ ದಿನ ವಾತಾವರಣವನ್ನು ಗಮನಿಸಿದ ಬಳಿಕವೇ ಹಾರಾಟ ಆರಂಭಿಸಲಾಗುತ್ತದೆ ಎಂದು ಇಬ್ಬರು ಯುವತಿಯರು ಹೇಳಿದ್ದಾರೆ.

Comments are closed.