ರಾಷ್ಟ್ರೀಯ

ಮಾಹಿತಿ ಸೋರಿಕೆ ಸವಾಲು ಹಾಕಿದ್ದ ಟ್ರಾಯ್ ಮುಖ್ಯಸ್ಥನ ಆಧಾರ್ ವೈಯುಕ್ತಿಕ ಮಾಹಿತಿಗಳೇ ಲೀಕ್!

Pinterest LinkedIn Tumblr


ನವದೆಹಲಿ: ಹ್ಯಾಕರ್ಸ್ ಗಳಿಗೆ ಸವಾಲೆಸೆಯಲು ಹೋಗಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ಪೇಚಿಗೆ ಸಿಲುಕಿದ ಘಟನೆ ಶನಿವಾರ ನಡೆದಿದೆ.
ಹ್ಯಾಕರ್ಸ್ ಗಳಿಗೆ ಸವಾಲೆಸಿದ್ದ ಶರ್ಮಾ ಅವರು. ತಮ್ಮ ಪೂರ್ಣ ಆಧಾರ್ ನಂಬರ್ ಅನ್ನು ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮಗೆ ಹಾನಿ ಎಸಗಲು ಕೇವಲ ಈ ನಂಬರ್’ನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತೀರಿ ನೋಡೋಣ ಎಂದು ಸವಾಲೊಡ್ಡಿದ್ದರು. ಶರ್ಮಾ ಅವರ ಈ ನಡೆ ಟ್ರೋಲ್’ಗೆ ಕಾರಣವಾಗಿತ್ತು.
ಆಧಾರ್ ಕಾರ್ಡ್ ದಾರರ ಹಿತಾಸಕ್ತಿ ಕಾಪಾಡಲು ಆಧಾರ್ ಕಾಯ್ದೆಗೆ ತಿದ್ದುಪಡಿ ತರಲು ನ್ಯಾ.ಶ್ರೀಕೃಷ್ಣ ಸಮಿತಿ ಶಿಫಾರಸು ಮಾಡಿದ ಬೆನ್ನಲ್ಲೇ ಶರ್ಮಾ ಅವರು ಈ ಟ್ವೀಟ್ ಮಾಡಿದ್ದರು.
ಶರ್ಮಾ ಅವರ ಟ್ವೀಟ್’ಗೆ ಮಧ್ಯಾಹ್ನ 1.45ರ ಸುಮಾರಿಗೆ ವ್ಯಕ್ತಿಯೋರ್ವ ಪ್ರತಿಕ್ರಿಯೆ ನೀಡಿದ್ದಾರೆ. ಶರ್ಮಾ ಅವರ ಆಧಾರ್ ನಂಬರ್ ಬಳಸಿಕೊಂಡು ಅವರ ಫೋನ್ ನಂಬರ್ ಪತ್ತೆ ಹಚ್ಚಿರುವುದಾಗಿ ವ್ಯಕ್ತಿಯೋರ್ವ ಹೇಳಿದ್ದಾರೆ.

ಫ್ರೆಂಚ್ ಭದ್ರತಾ ತಜ್ಞ ಹಾಗೂ ಆಧಾರ್ ವಿಮರ್ಷಕ ಎಲಿಯಟ್ ಆ್ಯಂಡ್ರಸನ್ ಅವರು, ಶರ್ಮಾ ಅವರ ಮೊಬೈಲ್ ನಂಬರ್, ಪ್ಯಾನ್ ಕಾರ್ಡ್ ನಂಬರ್, ಹಾಗೂ ಪರ್ಯಾಯ ಫೋನ್ ನಂಬರ್, ಇಮೇಲ್ ಐಡಿ, ಬಳಕೆ ಮಾಡುತ್ತಿರುವ ಫೋನ್ ಕುರಿತ ಮಾಹಿತಿ ಹಾಗೂ ವಾಟ್ಸ್ ಪ್ರೊಫೈಲ್ ಫೋಟೋ ಸೇರಿ ಇನ್ನಿತರೆ ಹಲವಾರು ಸೂಕ್ಷ್ಮ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ.

ಈ ಮಾಹಿತಿಗಳನ್ನು ಬಹಿರಂಗ ಪಡಿಸಿದ ಎಲಿಯೇಟ್ ಅವರು, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರಕ್ಕೆ ನೀಡಿದ ಮೊಬೈಲ್ ಸಂಖ್ಯೆಯೊಂದಿಗೆ ಇತರರ ಸಹಾಯದೊಂದಿಗೆ ಇನ್ನಿತರೆ ಮಾಹಿತಿಗಳನ್ನು ಕಲೆಹಾಯಿತು. ಇಲ್ಲಿಗೆ ಇದನ್ನು ನಾನು ನಿಲ್ಲಿಸುತ್ತೇನೆ. ಆಧಾರ್ ಕಾರ್ಡ್ ನಂಬರ್’ನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬಾರದು ಏಕೆ ಎಂಬುದು ನಿಮಗೆ ಅರ್ಥವಾಗಿದೆ ಎಂದು ತಿಳಿಯುತ್ತೇನೆಂದು ಟ್ವೀಟ್ ಮಾಡಿದ್ದಾರೆ.

ಇದಾದ ಬಳಿಕ ಮತ್ತೊಬ್ಬ ಹ್ಯಾಕರ್ ಶರ್ಮಾ ಅವರು ಬಳಕೆ ಮಾಡುತ್ತಿರುವ ಐಫೋನ್ ಹಾಗೂ ಅದರ ಫೋನ್ ನಂಬರ್’ನ್ನು ಬಹಿರಂಗ ಪಡಿಸಿದ್ದಾನೆ. ಇದಲ್ಲದೆ, ವಾಟ್ಸ್ಆ್ಯಪ್ ಪ್ರೊಫೈರ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

Comments are closed.