ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಕ್ಕೆ 1,484 ಕೋಟಿ ರೂ. ವೆಚ್ಚ

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ 84 ದೇಶಗಳಿಗೆ ಭೇಟಿ ನೀಡಿದ್ದಾರೆ. ಅದಕ್ಕಾಗಿ 1,484 ಕೋಟಿ ರೂ. ವೆಚ್ಚವಾಗಿದೆ ಎಂದು ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಕೆ.ಸಿಂಗ್‌ ರಾಜ್ಯ ಸಭೆಗೆ ತಿಳಿಸಿದ್ದಾರೆ.

ಪ್ರಧಾನಿಯವರ ವಿಮಾನದ ನಿರ್ವಹಣೆಗೆ 1,088.42 ಕೋಟಿ ರೂ., 387.26 ಕೋಟಿ ರೂ. ಮೊತ್ತವನ್ನು ಚಾರ್ಟರ್ಡ್‌ ವಿಮಾನದ ಬಳಕೆಗೆ ವೆಚ್ಚ ಮಾಡಲಾಗಿದೆ. 2014ರ ಜೂ.15 ರಿಂದ 2018ರ ಜೂ.10ರ ವರೆಗಿನ ಅವಧಿಯಲ್ಲಿನ ವೆಚ್ಚ ಇದಾಗಿದೆ.

ಹಾಟ್‌ಲೆçನ್‌ಗಾಗಿ 9.12 ಕೋಟಿ ರೂ. ವೆಚ್ಚವಾಗಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ 2017-18, 2018-19ನೇ ಸಾಲಿನಲ್ಲಿ ನಡೆಸಲಾಗಿರುವ ವಿದೇಶ ಪ್ರವಾಸದ ಅವಧಿಯಲ್ಲಿ ಬಳಕೆ ಮಾಡಲಾಗಿರುವ ಹಾಟ್‌ಲೆನ್‌ ವೆಚ್ಚ ಅದರಲ್ಲಿಸೇರ್ಪಡೆ ಯಾಗಿಲ್ಲ. 2015-16ನೇ ಸಾಲಿನಲ್ಲಿ ಪ್ರಧಾನಿ 24, 2016-17ನೇ ಸಾಲಿನಲ್ಲಿ 18, 2017-18ನೇ ಸಾಲಿನಲ್ಲಿ 19 ದೇಶಗಳಿಗೆ ಪ್ರವಾಸ ಕೈಗೊಂಡಿದ್ದರು ಎಂದು ಅವರು ಹೇಳಿದ್ದಾರೆ.

Comments are closed.