ಕರ್ನಾಟಕ

ಅಕ್ರಮ ಸಂಬಂಧ ಹೊಂದಿದ ಪೇದೆ ಪತ್ನಿ-ಇನ್ಸ್‌ಪೆಕ್ಟರ್‌ ರಿಂದ  ಕ್ವಾರ್ಟರ್ಸ್‌ಗೇ ಬೆಂಕಿ!

Pinterest LinkedIn Tumblr


ಬಳ್ಳಾರಿ: ಕಾನೂನು ಕಾಪಾಡಬೇಕಾದ ಇನ್ಸ್‌ಪೆಕ್ಟರ್‌ವೊಬ್ಬ ಸಹುದ್ಯೋಗಿ ಪೇದೆಯೊಬ್ಬನ ಪತ್ನಿಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧ ಡಿಆರ್‌ ಕ್ವಾರ್ಟರ್ಸ್‌ಗೆ ಬೆಂಕಿ ಬಿದ್ದು ಬಟ್ಟಾ ಬಯಲಾಗಿದೆ .

ವೈರ್‌ಲೆಸ್‌ ವಿಭಾಗದ ಇನ್ಸ್‌ಪೆಕ್ಟರ್‌ ಕಿರಣ್‌ ಸಾಮ್ರಾಟ್‌ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದ ಪೇದೆಯೊಬ್ಬರ ಪತ್ನಿಯೊಂದಿಗೆ 5 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದ. ಪೇದೆ ಕೆಲಸಕ್ಕೆಂದು ತೆರಳಿದ್ದಾಗ ಪತ್ನಿ ಇನ್ಸ್‌ಪೆಕ್ಟರ್‌ ಕಿರಣ್‌ ಮನೆಗೆ ಆಗಮಿಸುತ್ತಿದ್ದಳು.

ಎಂದಿನಂತೆ ಗುರುವಾರ ರಾತ್ರಿ ಆಗಮಿಸಿದ ಮಹಿಳೆ ಕಿರಣ್‌ನೊಂದಿಗೆ ಮದ್ಯ ಸೇವಿಸಿದ್ದು ಜಗಳ ಆರಂಭವಾಗಿದೆ. ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಕ್ವಾರ್ಟರ್ಸ್‌ಗೆ ಬೆಂಕಿ ಹಚ್ಚುವ ಮಟ್ಟಕ್ಕೆ ತಲುಪಿದೆ. ಬೆಂಕಿಗೆ ಕ್ವಾರ್ಟರ್ಸ್‌ನಲ್ಲಿದ್ದ ಪೀಠೊಪಕರಣಗಳು ಭಸ್ಮವಾಗಿದೆ.

ಸುತ್ತಲಿದ್ದ ಪೊಲೀಸ್‌ ಸಿಬಂದಿಗಳು ಬೆಂಕಿ ನಂದಿಸಿ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಿರಣ್‌ಗೂ ವಿವಾಹವಾಗಿದ್ದು ಘಟನೆ ನಡೆದ ವೇಳೆ ಪತ್ನಿ ಮನೆಯಲ್ಲಿ ಇರಲಿಲ್ಲ .

ಪೊಲೀಸರು ಸ್ಥಳಕ್ಕೆ ಆಗಮಿಸಿದ ವೇಳೆ ಕುಡಿದ ಮತ್ತಿನಲ್ಲಿದ್ದ ಮಹಿಳೆ ನನ್ನ ಇಷ್ಟ ನಾನು ಏನು ಬೇಕಾದರೂ ಮಾಡುತ್ತೇನೆ ನೀವ್ಯಾರ್‌ರೀ.. ಕೇಳ್ಳೋದಕ್ಕೆ ಎಂದು ಆವಾಜ್‌ ಹಾಕಿದ್ದಾಳೆ.

ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಕಿರಣ್‌ ಸಾಮ್ರಾಟ್‌ ನನ್ನು ಅಮಾನತು ಮಾಡಿ ವಶಕ್ಕೆ ಪಡೆದಿದ್ದಾರೆ. ಪೇದೆ ಪತ್ನಿಯನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸರ್ಕಾರಿ ಸೊತ್ತು ಹಾನಿ ಮಾಡಿದ ಪ್ರಕರಣ ದಲ್ಲಿ ಇಬ್ಬರ ವಿರುದ್ಧ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.