ರಾಷ್ಟ್ರೀಯ

ಭಯೋತ್ಪಾದನೆಯನ್ನು ಮೀರಿಸಿದ ರಸ್ತೆ ಹೊಂಡ ಸಾವಿನ ಸಂಖ್ಯೆ: ಸುಪ್ರೀಂ ಕೋರ್ಟ್

Pinterest LinkedIn Tumblr


ಹೊಸದಿಲ್ಲಿ : ದೇಶಾದ್ಯಂತ ರಸ್ತೆ ಹೊಂಡಗಳಲ್ಲಿ ಬಿದ್ದು ಸಾಯುತ್ತಿರುವವರ ಸಂಖ್ಯೆಯು ಭಯೋತ್ಪಾದಕ ಕೃತ್ಯಗಳಿಗೆ ಬಲಿಯಾಗುವವರ ಸಂಖ್ಯೆಗಿಂತಲೂ ಹೆಚ್ಚಿದೆ ಎಂದು ಸುಪ್ರೀಂ ಕೋರ್ಟ್‌ ಇಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ದೇಶಾದ್ಯಂತ ಹೊಂಡ ಗುಂಡಿಗಳಿಂದ ಕೂಡ ರಸ್ತೆಗಳ ಶೋಚನೀಯ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು.

ದೇಶಾದ್ಯಂತದ ರಸ್ತೆ ಹೊಂಡಗಳ ದುಸ್ಥಿತಿಯನ್ನು ಅವಲೋಕಿಸುವಂತೆ ಜಸ್ಟಿಸ್‌ ಮದನ್‌ ಬಿ ಲೋಕೂರ್‌ ಮತ್ತು ಜಸ್ಟಿಸ್‌ ದೀಪಿಕಾ ಗುಪ್ತಾ ಅವರನ್ನು ಒಳಗೊಂಡ ಪೀಠ, ಸುಪ್ರೀಂ ಕೋರ್ಟ್‌ ನ ರಸ್ತೆ ಸುರಕ್ಷಾ ಸಮಿತಿಯನ್ನು ಕೇಳಿಕೊಂಡಿತು.

ದೇಶಾದ್ಯಂತದ ರಸ್ತೆಗಳ ಸ್ಥಿತಿಗತಿ ಅತ್ಯಂತ ಭೀತಿಕಾರಕವಾಗಿದ್ದು ಇದು ಜನರ ಜೀವನ್ಮರಣ ಪ್ರಶ್ನೆಯಾಗಿದೆ. ರಸ್ತೆ ಹೊಂಡಗಳಿಂದಾಗಿ ಸಂಭವಿಸುವ ಅಪಘಾತಗಳಲ್ಲಿ ಮೃತರಾಗುವವರ ಕುಟುಂಬದವವರು ಸೂಕ್ತ ಪರಿಹಾರ ಪಡೆಯಲು ಅರ್ಹರಿರುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿತು.

Comments are closed.