ರಾಷ್ಟ್ರೀಯ

ಮೋದಿ ಅಪ್ಪಿಕೊಂಡ ರಾಹುಲ್​ಗೆ ಸದನ ಶಿಸ್ತು ಪಾಲಿಸಿ ಎಂದ ಸ್ಪೀಕರ್​!

Pinterest LinkedIn Tumblr


ನವದೆಹಲಿ: ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಲಿಂಗಿಸಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರ ನಡೆಯನ್ನು ಲೋಕಸಭೆ ಸ್ಪೀಕರ್​ ಸುಮಿತ್ರಾ ಮಹಾಜನ್​ ಖಂಡಿಸಿದ್ದಾರೆ.

ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರು ತಮ್ಮ ಭಾಷಣದಲ್ಲಿ ರಾಹುಲ್​ ಗಾಂಧಿ ನಡೆಯನ್ನು ‘ಚಿಪ್ಕೋ ಆಂದೋಲನ’ ಎಂದು ಬಣ್ಣಿಸಿದರು. ಈ ನಂತರ ಮಾತನಾಡಿದ ಸ್ಪೀಕರ್​ ಮಹಾಜನ್​ ಅವರು ರಾಹುಲ್​ ಗಾಂಧಿ ಪ್ರಧಾನಿಯನ್ನು ಆಲಿಂಗಿಸಿದ್ದು ನನಗೂ ಇಷ್ಟವಾಗಲಿಲ್ಲ. ಪ್ರಧಾನಿ ಹುದ್ದೆಗೆ ಒಂದು ಶಿಷ್ಟಾಚಾರವಿರುತ್ತದೆ. ಅದರಲ್ಲೂ ಸದನದ ಒಳಗೆ ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿಯಾಗಿರುತ್ತಾರೆಯೇ ಹೊರತು ಕೇವಲ ಮೋದಿಯಾಗಿರುವುದಿಲ್ಲ ಎಂದು ಹೇಳಿದರು.

ಹಾಗಾಗಿ ಸದನದ ಪ್ರತಿಯೊಬ್ಬ ಸದಸ್ಯ ಪ್ರಧಾನಿ ಹುದ್ದೆಯ ಶಿಷ್ಟಾಚಾರದ ಕುರಿತು ತಿಳಿದಿರಬೇಕು ಮತ್ತು ಸದನದ ಶಿಸ್ತನ್ನು ಪಾಲಿಸಬೇಕು. ಎಲ್ಲರೂ ತಪ್ಪದೆ ಸದನದ ಶಿಸ್ತನ್ನು ಪಾಲಿಸಬೇಕು. ನನಗೆ ವೈಯಕ್ತಿಕವಾಗಿ ರಾಹುಲ್​ ಗಾಂಧಿಯ ಮೇಲೆ ಯಾವುದೇ ದ್ವೇಷವಿಲ್ಲ. ರಾಹುಲ್​ ನನ್ನ ಮಗನಿದ್ದಂತೆ ಎಂದು ಸ್ಪೀಕರ್​ ತಿಳಿಸಿದರು.

Comments are closed.