ರಾಷ್ಟ್ರೀಯ

40 ಕಾಮುಕರಿಂದ ಯುವತಿ ಮೇಲೆ 4 ದಿನ ಅತ್ಯಾಚಾರ!

Pinterest LinkedIn Tumblr


ಹರ್ಯಾಣ: ಚಂಢೀಗಡ ಮೂಲದ ಯುವತಿ ಮೇಲೆ 40 ಮಂದಿ ಕಾಮುಕರು ಅಮಾನುಷವಾಗಿ ನಾಲ್ಕು ದಿನಗಳ ಕಾಲ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ಹರ್ಯಾಣದ ಪಂಚಕುಲಾದಲ್ಲಿ ನಡೆದಿದೆ.

ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಪಂಚಕುಲಾ ಜಿಲ್ಲೆಯ ಮೋರ್ನಿ ಹಿಲ್​ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗೆಸ್ಟ್​ ಹೌಸ್ ಒಂದರಲ್ಲಿ ಕೂಡಿಹಾಕಿದ್ದರು. ನಾಲ್ಕು ದಿನಗಳ ಕಾಲ ಗೃಹಬಂಧನದಲ್ಲಿರಿಸಿ ಸುಮಾರು ನಲ್ವತ್ತು ಮಂದಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಯುವತಿ ನಾಲ್ಕು ದಿನಗಳ ಬಳಿಕ ತಪ್ಪಿಸಿಕೊಂಡು ಬಂದು ಮನೆಯವರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರಿಗಾಗಿ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.