ಕರಾವಳಿ

ಕೊಡಮಣಿತ್ತಾಯ ದೈವದ ಶಾಪವಿತ್ತಾ ಶೀರೂರು ಶ್ರೀಗಳಿಗೆ? ಹರಿದಾಡುತ್ತಿದೆ ವೈರಲ್ ವೀಡಿಯೊ

Pinterest LinkedIn Tumblr

ಉಡುಪಿ: ಶಿರೂರು ಸ್ವಾಮೀಜಿ ವೃಂದಾವನ ಸೇರುತ್ತಿದ್ದಂತೆಯೇ ಅವರ ಬಗೆಗಿನ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶಿರೂರು ಶ್ರೀಗಳ ಸಾವಿನ ಬಗ್ಗೆ ಹಲವಾರು ಊಹಾಪೋಹಗಳು ಹಬ್ಬುತ್ತಿದೆ. ಧರ್ಮನೇಮೋತ್ಸವ ಸಂದರ್ಭದಲ್ಲಿ ದೈವ ನೀಡಿದ ಸೂಚನೆಯನ್ನು ವಿಡಂಬನೆ ಮಾಡಿರುವುದು ಶ್ರೀಗಳಿಗೆ ಕಂಟಕವಾಯಿತೇ ಎನ್ನುವ ಪ್ರಶ್ನೆಯೂ ಇದೀಗ ಚರ್ಚೆಗೆ ಕಾರಣವಾಗಿದೆ.

ಉಡುಪಿ ಜಿಲ್ಲೆ ಪಡುಬಿದ್ರೆಯಲ್ಲಿ ಕೊಡಮಣಿತ್ತಾಯ ದೈವದ ಧರ್ಮ ನೇಮೋತ್ಸವದಲ್ಲಿ ಶಿರೂರು ಶ್ರೀಗಳು ಭಾಗವಹಿಸಿದ್ದರು. ಈ ವೇಳೆ ದೈವವೇನೋ ಕೈ ಸನ್ನೆಯಲ್ಲಿ ಶಿರೂರು ಶ್ರೀಗಳಿಗೆ ಸೂಚನೆ ನೀಡುತ್ತಿತ್ತು. ಆದ್ರೆ ಅದನ್ನು ಶ್ರೀಗಳು ಕೈ ಸನ್ನೆಯಲ್ಲೇ ವಿಡಂಬನೆ ಮಾಡಿದ್ದರು.ಅದರಲ್ಲೂ ಪಡುಬಿದ್ರೆಯಲ್ಲಿ ನಡೆದ ಧರ್ಮನೇಮೋತ್ಸವದಲ್ಲಿ ಭಾಗವಹಿಸಿದ್ದ ಸ್ವಾಮೀಜಿ ದೈವದ ಮನನೋಯಿಸಿದ್ದರು. ದೈವ ಸನ್ಮಾನಿಸುವ ಸಂದರ್ಭ ದೈವ ಪಾತ್ರಧಾರಿಯ ಮನನೋಯಿಸಿದ್ದರು .ಇದರಿಂದ ಭಕ್ತರು ಹಾಗೂ ಕುಟುಂಬಿಕರು ಅಸಮಾಧಾನಗೊಂಡಿದ್ದರು ಸ್ವಾಮೀಜಿ ಯಾಕೆ ಹೀಗೆ ಮಾಡಿದರು ಅನ್ನೋ ಸಂಶಯ ಅಲ್ಲಿ ನೆರೆದಿಂದ ಜನರು ಸಂಶಯ ವ್ಯಕ್ತಪಡಿಸಿದ್ದರು.

ಮೊದಲೇ ದೈವ ಸೂಚನೆ ನೀಡಿದ್ದಾ?
ನೀನು ನಗೇನು ಕೊಟ್ಟಿಲ್ಲ….’ನಾನೇ ಎಲ್ಲ, ನೀನೇನೂ ಅಲ್ಲ ಎನ್ನುವಂತೆ ಭಾವನೆಯನ್ನು ಕೈಸನ್ನೆ ಮೂಲಕ ಸ್ವಾಮೀಜಿ ದೈವಕ್ಕೆ ತೋರಿಸಿದ್ದರು. ಇದರಿಂದಾಗಿ ಕೊಡಮಣಿತ್ತಾಯ ದೈವ ‘ನೀನು ಎನೂ ಅಲ್ಲ, ಎಲ್ಲಾ ನಾನು’ ಅನ್ನೋ ಸೂಚನೆ ನೀಡಿತ್ತು. ಅಲ್ಲದೇ ಇದರ ಪರಿಣಾಮ ಮುಂದೆ ತೊಂದರೆ ಎದುರಿಸಬೇಕಾದೀತು ಎಂದು ಎಚ್ಚರಿಕೆಯನ್ನು ನೀಡಿತ್ತೆನ್ನಲಾಗಿದೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಬಾರೀ ವೈರಲ್ ಆಗ್ತಾ ಇದ್ದು ಬಾರೀ ಚರ್ಚೆ ನಡೆಯುತ್ತಿದೆ.

Comments are closed.