ರಾಷ್ಟ್ರೀಯ

ಲೋಕಸಭೆಯಲ್ಲಿ ಮೋದಿಯನ್ನು ಅಪ್ಪಿಕೊಂಡ ರಾಹುಲ್ ಗಾಂಧಿ

Pinterest LinkedIn Tumblr


ನವದೆಹಲಿ: ಅವಿಶ್ವಾಸ ಮಂಡನೆಯ ಚರ್ಚೆಯ ವೇಳೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಯವರು, ಪಿಎಂ ಮೋದಿ, ಬಿಜೆಪಿ ಹಾಗೂ ಆರ್​ಎಸ್​ಎಸ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು “ನಾನು ಬಿಜೆಪಿ ಪಾಲಿಗೆ ಪಪ್ಪು ಆಗಿರಬಹುದು, ಆದರೆ ನನ್ನ ಹೃದಯದಲ್ಲಿ ಅವರ ಮೇಲೆ ಪ್ರೀತಿ ಇದೆ. ನನಗೆ ಧರ್ಮ ಎಂದರೇನು ಎಂದು ಕಲಿಸಿದ ಬಿಜೆಪಿ ಹಾಗೂ ಆರ್​ಎಸ್​ಎಸ್​ಗೆ ಋಣಿಯಾಗಿದ್ದೇನೆ. ಅವರು ನನಗೆ ಭಾರತೀಯನಾಗಿರುವುದೆಂದರೇನು ಎಂಬುವುದನ್ನು ಕಲಿಸಿದ್ದಾರೆ. ನಾನು ಇದೇ ರೀತಿ ಅವರನ್ನು ಪ್ರೀತಿಸುತ್ತೇನೆ. ಆ ಮೂಲಕ ಅವರನ್ನು ಕಾಂಗ್ರೆಸ್​ನೆಡೆ ಕರೆತರುವ ಪ್ರಯತ್ನ ಮಾಡುತ್ತೇನೆ” ಎಂದಿದ್ದಾರೆ.

ರಾಹುಲ್​ ಗಾಂಧಿ ತನ್ನ ಭಾಷಣದ ಮೂಲಕ ಆಕ್ರಮಣಕಾರಿಯಾಗಿ ಮಾತನಾಡಿದ್ದಾರೆ. “ಭಾರತ ಮಹಿಳೆಯರ ರಕ್ಷಣೆ ಮಾಡುವಲ್ಲಿ ಎಡವಿದೆ. ದೇಶದ ವಿವಿಉಧ ಭಾಗಗಳಲ್ಲಿ ಬಡವರು, ಆದಿವಾಸಿಗಳು ಹಾಗೂ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಹೀಗಿದ್ದರೂ ಮೋದಿಯವರ ಬಾಯಿಯಿಂದ ಒಂದು ಮಾತು ಬರುವುದಿಲ್ಲ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ, ಅವರ ಮಂತ್ರಿ ಮಂಡಲದ ಕೆಲ ಮಂತ್ರಿಗಳೇ ಮಹಿಳೆಯ ಮೇಲೆ ಕೈ ಹಾಕಿದ್ದಾರೆ. ಹೀಗಿದ್ದರೂ ಮೋದಿ ಮಾತನಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ಮನದಾಳದ ಮಾತುಗಳನ್ನು ಜನರೆದುರು ಹೆಳುವುದು ಪ್ರಧಾನಿಯ ಕರ್ತವ್ಯ. ಯಾವುದಾದರೂ ಒಬ್ಬ ವ್ಯಕ್ತಿಯ ಮೇಲೆ ದಾಳಿ ನಡೆಯುತ್ತಿದೆ ಎಂದಾದರೆ ಅದು ಕೇವಲ ವ್ಯಕ್ತಿಯ ಮೇಲೆ ನಡೆಯುವ ದಾಳಿಯಲ್ಲ, ಬದಲಾಗಿ ಸಂವಿಧಾನದ ಮೇಲೆ ನಡೆಯುವ ದಾಳಿ ಎಂಬುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು” ಎಂದಿದ್ದಾರೆ.

Comments are closed.