ರಾಷ್ಟ್ರೀಯ

ಕೇರಳದಲ್ಲಿ ಮಳೆಗೆ 39 ಬಲಿ, ಪರಿಹಾರ ಶಿಬಿರಗಳಲ್ಲಿ 1.18 ಲಕ್ಷ ಜನ

Pinterest LinkedIn Tumblr


ತಿರುವನಂತಪುರ : ಕೇರಳದ ಬಹುತೇಕ ಭಾಗಗಳಲ್ಲಿ ಜಡಿ ಮಳೆಯಾಗುತ್ತಿದ್ದು ಸುಮಾರು 1.18 ಲಕ್ಷ ಮಂದಿ ರಾಜ್ಯಾದ್ಯಂತದ ನಿರಾಶ್ರಿತರ ಶಿಬಿರಗಳಲ್ಲಿ ಆಸರೆ ಪಡೆದಿದ್ದಾರೆ. ರಾಜ್ಯದ ವಿವಿಧೆಡೆಗಳಲ್ಲಿ ವ್ಯತ್ಯಸ್ತ ತೀವ್ರತೆಯಲ್ಲಿ ಜಡಿಮಳೆಯಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜುಲೈ 9ರಿಂದ ಆರಂಭವಾಗಿರುವ ಎರಡನೇ ಹಂತದ ಜಡಿಮಳೆಗೆ ಈ ತನಕ 39 ಜೀವಗಳು ಬಲಿಯಾಗಿವೆ. ಮುಂಗಾರು ಮಳೆ ಕೇರಳಕ್ಕೆ ಕಳೆದ ಮೇ 29ರಂದೇ ಅಪ್ಪಳಿಸಿತ್ತು.

ಪ್ರಕೃತ 50,836 ಮಂದಿ ಅಲಪ್ಪುಳದಲ್ಲಿನ 212 ಶಿಬಿರಗಳಲ್ಲಿ ಆಸರೆ ಪಡೆದಿದ್ದಾರೆ. ನೆರೆಯ ಕೋಟ್ಟಯಂನ 164 ಶಿಬಿರಗಳಲ್ಲಿ 37,657 ಮಂದಿ ಆಸರೆ ಪಡೆದಿದ್ದಾರೆ. ಮುಂಗಾರು ಮಳೆಯ ಆರ್ಭಟಕ್ಕೆ ಈ ಎರಡು ಜಿಲ್ಲೆಗಳು ತೀವ್ರವಾಗಿ ತತ್ತರಿಸಿದ್ದು ಇಲ್ಲಿ ಅತ್ಯಧಿಕ ನಾಶ ನಷ್ಟ, ಜೀವಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.