ರಾಷ್ಟ್ರೀಯ

ಕನ್ಹಯ್ಯ ಕುಮಾರ್ ವಿರುದ್ಧದ ಕ್ರಮ ಕಾನೂನು ಬಾಹಿರ: ದೆಹಲಿ ಹೈಕೋರ್ಟ್

Pinterest LinkedIn Tumblr


ನವದೆಹಲಿ: ಶಿಸ್ತು ಉಲ್ಲಂಘನೆ ಆರೋಪದಡಿ ಜೆಎನ್​​ಯೂ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್​ಗೆ ಜವಹರಲಾಲ್ ನೆಹರು ವಿಶ್ವವಿದ್ಯಾಲಯ ವಿಧಿಸಿದ್ದ ದಂಡವನ್ನ ದೆಹಲಿ ಹೈಕೋರ್ಟ್ ತಳ್ಳಿ ಹಾಕಿದ್ದು, ಆ ಆದೇಶ ಕಾನೂನು ವಿರೋಧಿ, ಅಸಂಬದ್ಧವಾದುದು ಎಂದು ಅಭಿಪ್ರಾಯಪಟ್ಟಿದೆ.

ಪಾರ್ಟಿಗಳ ಸೂಕ್ತ ವಿಚಾರಣೆ ಬಳಿಕ ನಿರ್ಧಾರಕ್ಕೆ ಬರುವಂತೆ ನ್ಯಾಯಾಲಯ ಜೆಎನ್​ಯೂಗೆ ಆದೇಶಿಸಿದೆ.

2016ರಲ್ಲಿ, ಸಂಸತ್ತಿನ ದಾಳಿಯ ಅಪರಾಧಿ ಅಫ್ಜಲ್ ಗುರು ಗಲ್ಲು ಶಿಕ್ಷೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ದೇಶದ ವಿರೋಧಿ ಘೋಷಣೆ ಕೂಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್​ಯೂ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್, ತಮಗೆ ಅಶಿಸ್ತಿನ ಆರೋಪದ ಮೇಲೆ ಜೆಎನ್​ಯೂ ರಚಿಸಿದ್ದ ಉನ್ನತ ಮಟ್ಟದ ಸಮಿತಿ ವಿಧಿಸಿದ್ದ 10,000 ರೂ. ದಂಡದ ವಿಚಾರವನ್ನ ಪ್ರಶ್ನಿಸಿ ದೆಹಲಿ ಹೈಕೋರ್ಟ್​ ಮೊರೆ ಹೋಗಿದ್ದರು.

ಕನ್ಹಯ್ಯ ಸೇರಿದಂತೆ 13 ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ್ದ ಸಮಿತಿ, ಉಮರ್ ಖಾಲಿದ್ ಉಚ್ಚಾಟನೆಗೂ ಶಿಫಾರಸು ಮಾಡಿತ್ತು.

ಬಳಿಕ ಎಲ್ಲ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ, ಜೆಎನ್​ಯೂ ನಿರ್ಧಾರವನ್ನ ತಳ್ಳಿ ಹಾಕಿರುವ ಕೋರ್ಟ್​, ಮೇಲ್ಮನವಿ ಪ್ರಾಧಿಕಾರದ ಮುಂದೆ ಸಮಿತಿ ನಿರ್ಧಾರವನ್ನ ಪರಿಶೀಲನೆಗೆ ಒಳಪಡಿಸುವಂತೆ ಆದೇಶಿಸಿದೆ.

2016ರ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ಜಯ್ಯ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಅವರನ್ನ ಫೆಬ್ರವರಿ 2016ರಂದು ದೇಶದ್ರೋಹದ ಆರೋಪದಡಿ ಬಂಧಿಸಲಾಗಿತ್ತು. ಬಳಿಕ ಎಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

Comments are closed.