ರಾಷ್ಟ್ರೀಯ

ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ ! ಚಿನ್ನದ ದರ ಗರಿಷ್ಟ ಇಳಿಕೆ

Pinterest LinkedIn Tumblr

ನವದೆಹಲಿ: ಚಿನ್ನದ ದರ ಬುಧವಾರ 250 ರು. ಇಳಿಕೆಯಾಗಿದ್ದು, 5 ತಿಂಗಳ ಕನಿಷ್ಠಕ್ಕಿಳಿದಿದೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 2795 ರು.ಗೆ ಇಳಿದಿದೆ. ಇನ್ನು ದಿಲ್ಲಿಯಲ್ಲಿ 10 ಗ್ರಾಂಗೆ 30,800 ರು. ಆಗಿದೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಆಭರಣಗಳಿಗೆ ಬೇಡಿಕೆ ಕುಸಿದಿರುವುದು ಹಾಗೂ ಜಾಗತಿಕವಾಗಿಯೂ ಚಿನ್ನದ ಮಾರುಕಟ್ಟೆ ಕುಸಿದಿರುವುದು ಚಿನ್ನದ ದರ ಇಳಿಕೆಗೆ ಕಾರಣವಾಗಿದೆ.

ಇದೇ ವೇಳೆ ದಿಲ್ಲಿಯಲ್ಲಿ ಬೆಳ್ಳಿ ಕೂಡ ಪ್ರತಿ ಕೆ.ಜಿಗೆ 620 ರು. ಕುಸಿದಿದ್ದು, 39,200 ರು. ಆಗಿದೆ. 2018ರ ಫೆಬ್ರವರಿಯಲ್ಲಿ ಚಿನ್ನ ಈ ದರವನ್ನು ಮುಟ್ಟಿತ್ತು. ಮಂಗಳವಾರ ಕೂಡ ಚಿನ್ನದ ದರ 100 ರು. ಇಳಿಕೆ ದಾಖಲಿಸಿತ್ತು.

Comments are closed.