ಕರಾವಳಿ

ಜುಲೈ 22ರಂದು ತುಳುವೆರ್ ತುಳಿಪು 2018 – ಕೋಸ್ಟಲ್‌ವುಡ್ ಕಲಾವಿದರಿಂದ ಕೆಸರ್‍ದ ಗೊಬ್ಬುದ ಸಂಭ್ರಮ

Pinterest LinkedIn Tumblr

ಮಂಗಳೂರು : ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ(ರಿ) ಇದರ ಆಶ್ರಯದಲ್ಲಿ ಜುಲೈ 22ರಂದು ಆದಿವಾರ ಜಯ-ವಿಜಯ ಜೋಡುಕರೆ ಕಂಬಳಗದ್ದೆ ಜಪ್ಪಿನಮೊಗರು ಇಲ್ಲಿ ತುಳುವೆರೆ ತುಳಿಪು 2018 ಕಾರ್ಯಕ್ರಮ ನಡೆಯಲಿದೆ.

ತುಳಿಪು ಚಿತ್ರ ರಂಗದ ಕಲಾವಿದ ಕಲಾವಿದ, ತಂತ್ರಜ್ಞ ದಿಗ್ಗಜರು ಸೇರಿ ಸಂಭ್ರಮಿಸುವ ಕಾರ್ಯಕ್ರಮವೇ ತುಳುವೆರೆ ತುಳಿಪು. ಈ ಕಾರ್ಯ ಕ್ರಮದಲ್ಲಿ ಗ್ರಾಮೀಣ ಆಟೋಟ ಸ್ಪರ್ಧೆಯ ಜೊತೆ ಕಲಾವಿದರು ಕೆಸರಿ ನಲ್ಲಿ ಮೋಜು ಮಸ್ತಿ ಹಾಗೂ ಕೋಸ್ಟಲ್‌ವುಡ್ ಅಭಿಮಾನಿಗಳಾಗಿ ತುಳುವೆರ್ ತಿನಸ್ ತುಳುನಾಡಿನ ಸಾಂಪ್ರದಾಯಿಕ ತಿಂಡಿಗಳ ಸ್ಪರ್ಧೆ ನಡೆ ಯಲಿದೆ. ಆಯ್ದ ವಿಜೇತರಿಗೆ ಬಹು ಮಾನಗಳನ್ನು ನೀಡಲಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಪಮ್ಮಿ ಕೋಡಿ ಯಾಲ್‌ಬೈಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತುಳುವೆರ್ ತುಳಿಪಿನ ಉದ್ಘಾಟನೆ ನಂತರ ವಿವಿಧ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ ತುಳುನಾಡಿನ ಸವಿರುಚಿಯಾದ ಗಂಜಿ ಹಾಗೂ ವಿವಿಧ ಬಗೆಯ ಚಟ್ನಿ ಮತ್ತು ಇನ್ನಿತರ ಪದಾರ್ಥಗಳು ಇರಲಿವೆ. ಸಂಜೆ 6ಗಂಟೆಗೆ ಸಮಾರೋಪ ಕಾರ್ಯಕ್ರಮ ದಲ್ಲಿ ತುಳುನಾಡಿನ ಸಾಧಕ ಕಲಾವಿದರಾದ ರಾಜ್ ಬಿ ಶೆಟ್ಟಿ, ಸುಹಾನ್ ಪ್ರಸಾದ್, ಸೂರಜ್ ಕುಮಾರ್, ಧೀರಜ್ ನೀರ್‌ಮಾರ್ಗ ಇವ ರನ್ನು ಗಣ್ಯರು ಸಮ್ಮುಖದಲ್ಲಿ ಸನ್ಮಾನಿಸಲಾ ಗುವುದು ಮತ್ತು ಆಟೋಟ ಸ್ಫರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದವರು ತಿಳಿಸಿದ್ದಾರೆ.

ತುಳು ಚಿತ್ರರಂಗದ ಒಗ್ಗಟ್ಟನ್ನು ದೇಶ ವಿದೇಶದಲ್ಲಿ ಸಾರಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ತುಳು ಚಿತ್ರರಂಗದ ಗೌರವಾನ್ವಿತ ನಿರ್ಮಾ ಪಕರು, ಹಿರಿಯ ಹಾಗೂ ಕಿರಿಯ ನಿರ್ದೇಶಕರು, ದಿಗ್ಗಜ ಹಿರಿಯ ಹಾಸ್ಯಕಲಾವಿದರು ತುಳು ಚಿತ್ರರಂಗದ ಹೆಸರಾಂತ ನಾಯಕ ನಟ ನಟಿಯರು ಹಿರಿಯ ಕಿರಿಯ ಕಲಾವಿದರು, ತಂತ್ರ ಜ್ಞರು ಭಾಗವಹಿಸಿ ಈ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.

ಇದರ ಜೊತೆಗೆ ಜಿಲ್ಲೆಯ ರಾಜಕೀಯ ಮುಖಂಡರು, ಸಮಾಜ ಸೇವಕರು, ಹಾಗೂ ಊರಿನ ಭಾಂದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಮ್ಮಿ ಕೋಡಿ ಯಾಲ್‌ಬೈಲ್ತಿಳಿಸಿದ್ದಾರೆ.

ಗ್ರಾಮೀಣ ಕ್ರೀಡೆಗಳ ಪರಿಚಯ

ತುಳುವೆರೆ ತುಲಿಪು ಕೂಟ -೨೦೧೮ ಹೆಸರಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿಯ ಹಲವಾರು ಸ್ಪರ್ಧೆಗಳು ನಡೆಯಲಿವೆ. ಅವುಗಳಲ್ಲಿ ಪ್ರಮುಖ ವಾದವುಗಳೆಂದರೆ ಬಾಯಿಯಲ್ಲಿ ಲಿಂಬೆ ಚಮಚ ಇಟ್ಟು ನಡೆಯುವುದು, ಬಾಲ್ದಿಗೆ ನೀರು ತುಂಬಿಸುವುದು, ಗೋಣಿ ಚೀಲ ಓಟ, ಮೈದಾದಿಂದ ಹಣದ ನಾಣ್ಯ ಹುಡುಕುವುದು, ಕೆಸರಿನಲ್ಲಿ ಓಡುವುದು, ಚೆಂಡು ಪಾಸ್ ಮಾಡೋದು, ಹಗ್ಗ ಜಗ್ಗಾಟ, ಚೆಂಡು ಎಸೆಯುವುದು, ಕೆಸರಿನಲ್ಲಿ ಕೊಪ್ಪರಿಗೆ ಹುಡುಕುವುದು, ಜೋಡಿ ಎತ್ತಿನ ಓಟ ಇತ್ಯಾದಿ.

ಕೋಸ್ಟಲ್‌ವುಡ್‌ನ ಪ್ರಮುಖ ಕಲಾವಿದರಾದ ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ಪೃಥ್ವೀ ಅಂಬಾರ್, ಪ್ರಕಾಶ್ ಶೆಟ್ಟಿ ಧರ್ಮನಗರ, ಸೌರಭ್ ಭಂಡಾರಿ, ಅನೂಪ್ ಸಾಗರ್, ವಿಜೇತ್ ಸುವರ್ಣ, ಸ್ವರಾಜ್ ಶೆಟ್ಟಿ, ಪ್ರಜ್ವಲ್ ಪ್ರಕಾಶ್, ರಜನೀಶ್ ಉಡುಪಿ, ಮನೋಜ್ ಪುತ್ತೂರು, ಶ್ರವಣ್ ಕದ್ರಿ, ಪ್ರತೀಕ್ ಶೆಟ್ಟಿ, ಉದಯ್ ಪೂಜಾರಿ, ರಿತೇಶ್ ನಾಯಕ್, ಅಸ್ತಿಕ್ ಶೆಟ್ಟಿ, ರಾಹುಲ್ ಅಮೀನ್, ಪೂಜಾ ಶೆಟ್ಟಿ, ಅನ್ವಿತಾ ಸಾಗರ್, ಶಿಲ್ಪಾ ಸುವರ್ಣ, ಅಶ್ವಿನಿ ಕೋಟ್ಯಾನ್, ನವ್ಯಾ ಪೂಜಾರಿ, ಚಿರಶ್ರೀ, ಆರಾಧ್ಯಾ ಶೆಟ್ಟಿ, ಸ್ವಾತಿ ಬಂಗೇರ, ನಿರೀಕ್ಷಾ ಶೆಟ್ಟಿ, ಶೀತಲ್ ನಾಯಕ್, ಅಭಿಲಾಷಾ, ವಿದ್ಯಾಶ್ರೀ ಮುಂತಾದವರು ಆ ದಿನ ಇಲ್ಲಿರಲಿದ್ದಾರೆ. ಜತೆಗೆ ಹಿರಿಯ, ಕಿರಿಯ ನಿರ್ದೇಶಕರು, ನಿರ್ಮಾಪ ಕರು, ಕಾಮಿಡಿ ಕಲಾವಿದರು, ತಂತ್ರಜ್ಞರು ಸಹಿತ ಪ್ರಮುಖರು ಭಾಗವಹಿಸಲಿದ್ದಾರೆ.

ಪಮ್ಮಿ ಕೊಡಿಯಾಲ್‌ಬೈಲ್ ಅವರ ಮುಂದಾಳುತನದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ವು ಕೋಸ್ಟಲ್‌ವುಡ್‌ನ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿದೆ. ಬಹುತೇಕ ಎಲ್ಲ ಹಿರಿಯ ಕಿರಿಯ ಕಲಾವಿದರನ್ನು ಮತ್ತು ನಿರ್ಮಾಪಕರನ್ನು ಈ ಹೆಸರಲ್ಲಿ ಒಟ್ಟು ಸೇರಿಸುವುದು ಅವರ ಉದ್ದೇಶಗಳಲ್ಲಿ ಒಂದಾಗಿದೆ. ಜತೆಗೆ ತುಳು ಸಂಸ್ಕೃತಿಗೆ ಕೊಡುಗೆ ನೀಡುವುದು, ಮನೋರಂಜನೆ ಹಾಗೂ ಕೋಸ್ಟಲ್‌ವುಡ್‌ಗೆ ಪ್ರಚಾರ ನೀಡುವುದು ಕೂಡ ಇದರ ಹಿಂದಿನ ಉದ್ದೇಶಗಳ ಸಾಲಲ್ಲಿ ಸೇರುತ್ತವೆ ಎಂದು ಕ್ಯಾಟ್ಕಾದ ಪ್ರಧಾನ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ ತಿಳಿಸಿದ್ದಾರೆ.

Comments are closed.