ಕರಾವಳಿ

ಶೀರೂರು ಸ್ವಾಮೀಜಿ ಸಾವಿನ ಬಗ್ಗೆ ತನಿಖೆಗೆ ಒತ್ತಾಯಿಸಲ್ಲ…ಅಂತ್ಯಕ್ರಿಯೆಯಲ್ಲೂ ಭಾಗವಹಿಸಲ್ಲ : ಪೇಜಾವರ ಶ್ರೀ

Pinterest LinkedIn Tumblr

ಹುಬ್ಬಳ್ಳಿ : ಗುರುವಾರ ನಿಧನರಾದ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲ್ಲ. ನಾನು ಹುಬ್ಬಳ್ಳಿಯಲ್ಲಿ ಇದ್ದಿರುವ ಕಾರಣ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಉಡುಪಿ ಮಠದ ಪೇಜಾವರಶ್ರೀ ತಿಳಿಸಿದ್ದಾರೆ.

ಶೀರೂರು ಶ್ರೀಗಳ ನಿಧನದ ಕುರಿತು ಹುಬ್ಬಳ್ಳಿಯಲ್ಲಿ ಗುರುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ಬಗ್ಗೆ ತನಿಖೆ ನಡೆಸಿ ಎಂದು ಕೂಡ ನಾನು ಒತ್ತಾಯಿಸಲ್ಲ.

ಅವರು ಅನಾರೋಗ್ಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದಷ್ಟೇ ನನಗೆ ಗೊತ್ತಿರೋದು. ಅವರು ಎಲ್ಲಿ ಊಟ ಮಾಡಿದ್ದಾರೆ. ಎಲ್ಲಿಗೆ ಹೋಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ವಿಷ ಪ್ರಾಶನವಾಗಿದ್ದರೆ ವೈದ್ಯರು ವರದಿ ಕೊಡುತ್ತಾರೆ. ಪಟ್ಟದ ದೇವರ ವಿಷಯಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

Comments are closed.