ರಾಷ್ಟ್ರೀಯ

ಸಲಿಂಗಕಾಮದ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್​

Pinterest LinkedIn Tumblr


ನವದೆಹಲಿ: ಸಲಿಂಗ ಕಾಮ ಅಪರಾಧ ಎಂದು ಪರಿಗಣಿಸುವ ಸೆಕ್ಷನ್​ 377ನ್ನು ನಿರಪರಾಧೀಕರಣಗೊಳಿಸುವ ಆದೇಶವನ್ನು ಸುಪ್ರೀಂ ಕೋರ್ಟ್​ ತಡೆ ಹಿಡಿದಿದೆ.

ದೀಪಕ್​ ಮಿಶ್ರಾ ಅವರನ್ನು ಒಳಗೊಂಡ ಪಂಚ ಪೀಠ ಈ ಕುರಿತು ವಾದ ವಿವಾದವನ್ನು ಆಲಿಸಿತು. ಸೆಕ್ಷನ್​​ 377ರ ಕುರಿತು ವಾದವನ್ನು ಬೆಂಬಲಿಸುವವರು ಜು.20ರೊಳಗೆ ಲಿಖಿತ ಹೇಳಿಕೆಗಳನ್ನು ದಾಖಲಿಸಬೇಕು ಎಂದು ತಿಳಿಸಿದ್ದಾರೆ.

ಈ ಕುರಿತು ಮಂಗಳವಾರ ಆದೇಶವನ್ನು ತಡೆ ನೀಡಿರುವ ನ್ಯಾಯಾಮೂರ್ತಿ ದೀಪಕ್​ ಮಿಶ್ರಾ ಪೀಠ ಅಕ್ಟೋಬರ್​ 2ರಂದು ಅವರು ನಿವೃತ್ತಿ ಹೊಂದುತ್ತಿರುವ ದಿನದಂದೇ ತೀರ್ಪು ಪ್ರಕಟಿಸಲಿದ್ದಾರೆ.

ಸೆಕ್ಷನ್​ 377 ಸಲಿಂಗ ಕಾಮ ಅನೈಸರ್ಗಿಕ ಅಪರಾಧವಾಗಿದ್ದು, ಈ ಕಾಯ್ದೆ ಅನ್ವಯ ಒಂದೇ ಲಿಂಗದವರು ಪ್ರಕೃತಿಯ ಕ್ರಮಕ್ಕೆ ವಿರುದ್ಧವಾಗಿ ದೈಹಿಕ ಕ್ರಿಯೆಯನ್ನು ಸ್ವಯಂ ಪ್ರೇರಿತವಾಗಿ ಹೊಂದಿದ್ದು, ಅವರು ಜೈಲು ಶಿಕ್ಷೆಗೆ ಒಳಗಾಗುತ್ತಾರೆ. ಇವರಿಗೆ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377ರ ವಿರುದ್ಧ ದಾಖಲಾಗಿರುವ ಶುಶ್ರೂಷಾ ಅರ್ಜಿಗಳನ್ನು ಸುಪ್ರಿಂ ಕೋರ್ಟ್‌ ಮರುಪರಿಶೀಲನೆ ನಡೆಸುತ್ತಿದೆ. ಸೆಕ್ಷನ್‌ 377ಕ್ಕೆ ತಿದ್ದುಪಡಿ ತಂದು ಸಲಿಂಗ ಕಾಮವನ್ನು ಕಾನುನು ಬದ್ಧವಾಗಿಸಬೇಕೋ ಅಥವಾ ಅಪರಾಧವೆಂದು ಪರಿಗಣಿಸಬೇಕೋ ಎಂದು ಸುಪ್ರಿಂ ಕೋರ್ಟ್‌ನ 5 ನ್ಯಾಯಮೂರ್ತಿಗಳ ಪೀಠ ನಿರ್ಧರಿಸಲಿದೆ.

Comments are closed.