ರಾಷ್ಟ್ರೀಯ

ರಾಹುಲ್ ಗಾಂಧಿಯವರಲ್ಲಿ ವಿದೇಶಿ ರಕ್ತ ಹರಿಯುತ್ತಿದೆ ಎಂದ ಬಿಎಸ್‌ಪಿ ಉಪಾಧ್ಯಕ್ಷ ಉಚ್ಛಾಟನೆ

Pinterest LinkedIn Tumblr


ಲಖನೌ: ವಿದೇಶಿ ರಕ್ತದ ರಾಹುಲ್ ಗಾಂಧಿ ಪ್ರಧಾನಿಯಾಗಲಾರ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಬಹುಜನ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಜೈ ಪ್ರಕಾಶ್‌ ಸಿಂಗ್‌ರನ್ನು ಪಕ್ಷದ ಮುಖ್ಯಸ್ಥೆ ಮಾಯಾವತಿ ಮಂಗಳವಾರ ಉಚ್ಛಾಟಿಸಿದ್ದಾರೆ. ಜತೆಗೆ ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದಲೂ ಅವರನ್ನು ಮುಕ್ತಗೊಳಿಸಲಾಗಿದೆ.

ಸೋಮವಾರ ಲಖನೌದಲ್ಲಿ ನಡೆದಿದ್ದ ಪಕ್ಷದ ಸಭೆಯೊಂದರಲ್ಲಿ ಮಾತನಾಡಿದ್ದ ಜೈ ಪ್ರಕಾಶ್, ರಾಹುಲ್ ಗಾಂಧಿ ಅವರ ತಾಯಿಯನ್ನು ಅನುಸರಿಸುತ್ತಿದ್ದಾರೆ. ಅವರಲ್ಲಿ ವಿದೇಶಿ ರಕ್ತ ಹರಿಯುತ್ತಿದೆ. ಹೀಗಾಗಿ ಅವರು ಪ್ರಧಾನಿಯಾಗಲು ಸಾಧ್ಯವಿಲ್ಲ. ಅದರ ಬದಲಾಗಿ ಮಾಯಾವತಿಯವರೇ ಪ್ರಧಾನಿಯಾಗುವುದು ಸೂಕ್ತ ಎಂದು ಹೇಳಿಕೆ ನೀಡಿದ್ದರು.

ಆ ಸಭೆಯಲ್ಲಿ ಮಾಯಾವತಿ ಹಾಜರಿರಲಿಲ್ಲ. ಜತೆಗೆ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದ ಜೈ ಪ್ರಕಾಶ್, ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡು ಮೋದಿ ಟೀ ಮಾರಲು ತೆರಳಲಿದ್ದಾರೆ ಎಂದಿದ್ದರು.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಜತೆ ಮೈತ್ರಿಗೆ ಮುಂದಾಗಿರುವ ಮಾಯಾವತಿ, ಉಭಯ ಪಕ್ಷಗಳ ಜತೆ ಸಂಬಂಧ ವೃದ್ಧಿಸುವ ಕ್ರಮದಿಂದ ಜೈ ಪ್ರಕಾಶ್ ಉಚ್ಛಾಟನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

Comments are closed.