ರಾಷ್ಟ್ರೀಯ

ಸ್ಮಾರ್ಟ್ ಫೋನ್‌ಗಾಗಿ ಸ್ನೇಹಿತನನ್ನು ಅಪಹರಿಸಿ ಹತ್ಯೆ ಮಾಡಿದ!

Pinterest LinkedIn Tumblr


ಹೈದರಾಬಾದ್: ಮೊಬೈಲ್ ಫೋನ್‌ಗಾಗಿ ಗೆಳೆಯನನ್ನು ಅಪಹರಿಸಿ ಕೊಂದು ಹಾಕಿದ ಕರಾಳ ಘಟನೆ ಉಪ್ಪಳದಲ್ಲಿ ನಡೆದಿದ್ದು ಬಹಳ ತಡವಾಗಿ ಬೆಳಕಿಗೆ ಬಂದಿದೆ.

ಮೃತನನ್ನು ಪ್ರೇಮ್ ಎಂದು ಗುರುತಿಸಲಾಗಿದ್ದು, ಮಗ ಕಾಣೆಯಾಗಿದ್ದಾನೆಂದು ಆತನ ಪೋಷಕರು ಮೂರು ದಿನಗಳ ಹಿಂದೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಗರದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿಲಾದ ಪ್ರೇಮ್ ತನ್ನ ಸ್ನೇಹಿತ ಸಾಗರ (19)ನ ಜತೆ ಬೈಕ್‌ಲ್ಲಿ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸಾಗರನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳಪಡಿಸಿದಾಗ ಸ್ಮಾರ್ಟ್ ಫೋನ್‌ಗಾಗಿ ತಾನು ಗೆಳೆಯನನ್ನು ಕೊಂದು, ಸುಟ್ಟು ಹಾಕಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.

ಪ್ರೇಮ್ ಬಳಿ ಮೊಬೈಲ್ ಫೋನ್‌ನನ್ನು ನನಗೆ ಕೊಡುವಂತೆ ಕೇಳಿದ್ದೆ. ಆದರೆ ಆತ ನಿರಾಕರಿಸಿದ್ದ. ಹೀಗಾಗಿ ಆತನನ್ನು ಕೊಂದು ಮೊಬೈಲ್ ಫೋನ್ ಪಡೆದುಕೊಳ್ಳಲು ನಿರ್ಧರಿಸಿದೆ. ಪ್ರೇಮ್‌ನನ್ನು ರಾಮನಾಥಪುರದ ಮನೆಯಿಂದ ಲಾಂಗ್ ಡ್ರೈವ್ ನೆಪದಲ್ಲಿ ಕರೆದೊಯ್ದೆ. ಉಪ್ಪಳ ಪ್ರದೇಶದಲ್ಲಿ ಥಳಿಸಿ ಕೊಂದೆ. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆ ಎಂದಾತ ಹೇಳಿದ್ದಾನೆ.

ಮೃತ ಪ್ರೇಮ್ (17) ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ.

Comments are closed.