ರಾಷ್ಟ್ರೀಯ

ಶ್ರೀಮಂತ-ಬಡವರ ನಡುವಿನ ಅಂತರವನ್ನು ದೂರಾಗಿಸಲು ಕ್ರಮ ಕೈಗೊಂಡಿದ್ದೇವೆ; ಪ್ರಧಾನಿ ಮೋದಿ

Pinterest LinkedIn Tumblr

ವಾರಣಾಸಿ; ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ದೂರಾಗಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲಿಯೇ ಆ ಕ್ರಮದ ಫಲಿತಾಂಶ ಎಲ್ಲರಿಗೂ ತಿಳಿಯಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.

ಎರಡು ದಿನಗಳ ಕಾಲ ಉತ್ತರಪ್ರದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರು ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಿರ್ಜಾಪುರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿರುವ ಅವರು, ಬಡವರು ಹಾಗೂ ಶ್ರೀಮಂತರ ನಡುವಿನ ಅಂತರವನ್ನು ದೂರಾಗಿಸಲು ಪ್ರಮುಖ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಇತರ ಫಲಿತಾಂಶ ಶೀಘ್ರದಲ್ಲಿಯೇ ಎಲ್ಲರಿಗೂ ತಿಳಿಯಲಿದೆ. ಇನ್ನು ಕೆಲವೇ ದಿನಗಳಲ್ಲಿ ಬಡವರೂ ಕೂಡ ಆತ್ಮವಿಶ್ವಾಸದಿಂದ ಕಣ್ಣು ತೆರೆದು ನೋಡಲಿದ್ದಾರೆಂದು ಹೇಳಿದ್ದಾರೆ.

ರೈತರ ಹೆಸರಿನಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರಿಗೆ ಬೆಂಬಲ ಬೆಲೆ ಹೆಚ್ಚಿಸುವ ಕುರಿತಂತೆ ಚರ್ಚೆ ನಡೆಸಲು ಸಮಯವಿಲ್ಲ. ಈ ಕುರಿತ ಕಡತಗಳನ್ನೂ ಮುಂದಕ್ಕೆ ಸಾಗಲೂ ಬಿಡುತ್ತಿಲ್ಲ. ರೈತರ ಕುರಿತಂತೆ ಇದೀಗ ಮೊಸಳೆ ಕಣ್ಣೀರು ಹಾಕುತ್ತಿರುವವರು, ತಮ್ಮ ಅಧಿಕಾರಾವಧಿಯಲ್ಲಿ ರಾಷ್ಟ್ರದಾದ್ಯಂತ ಪೂರ್ಣಗೊಳ್ಳದೆ ನೆಲಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳತ್ತ ಏಕೆ ಗಮನ ಹರಿಸಲಿಲ್ಲ?

ಈ ಹಿಂದೆ ಇದ್ದ ಸರ್ಕಾರ ಕೂಡ ಅಪೂರ್ಣ ಯೋಜನೆಗಳನ್ನು ಕೈಗೆತ್ತಿಕೊಂಡು, ಅವುಗಳು ಯಶಸ್ವಿಯಾಗದಂತೆ ಮಾಡಿತ್ತು. ಪ್ರಸ್ತುತ ದೇಶದಲ್ಲಿರುವ ಪರಿಸ್ಥಿತಿಗಳಿಗೆಲ್ಲಾ ನಾವೇ ಕಾರಣ. ಈ ಯೋಜನೆಗಳು ಕಾಲಕ್ಕೆ ಸರಿಯಾಗಿ ಪೂರ್ಣಗೊಂಡಿದ್ದರೆ, ಜನರು ನಿಮಗೆ ಲಾಭವಾಗುವಂತೆ ಮಾಡುತ್ತಿದ್ದರು. ಬಿಜೆಪಿ-ಎನ್’ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೂರ್ವಾಂಚಲ್ ನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದರ ಫಲಿತಾಂಶವನ್ನು ಎಲ್ಲರೂ ನೋಡುತ್ತಿದ್ದಾರೆಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

Comments are closed.